gram ದೆಹಲಿಯಲ್ಲಿ ಆಯೋಜಿಸಿದ್ದ ಕರ್ನಾಟಕ ಮತ್ತು ಕೇರಳ ಸಂಸದರ ಸಮಾಲೋಚನೆ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಸಚಿವ ಪ್ರಲ್ಹಾದ ಜೋಶಿ ಹಾಗೂ ಇತರರು ಪಾಲ್ಗೊಂಡಿದ್ದರು.  
ಧಾರವಾಡ

ಧಾರವಾಡ ಜಿಲ್ಲೆಯ 72 ಗ್ರಾಪಂಗಳು ಕ್ಷಯ ಮುಕ್ತ gram

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ, ಕೇರಳ ಸಂಸದರ ಸಭೆಯಲ್ಲಿ ಸಚಿವ ಪ್ರಲ್ಹಾದ ಜೋಶಿ ಮಾಹಿತಿ
  • ರೋಗಿಗಳಿಗೆ ಪೌಷ್ಟಿಕಾಂಶದ ಬೆಂಬಲ ನೀಡಲಾಗುತ್ತಿದೆ.
  • ಧಾರವಾಡ ಜಿಲ್ಲೆ ಸಂಪೂರ್ಣ ಕ್ಷಯ ರೋಗ ಮುಕ್ತವಾಗುತ್ತ ದಾಪುಗಾಲಿರಿಸಿದೆ.
ಹುಬ್ಬಳ್ಳಿ: gram ಕ್ಷಯ ಮುಕ್ತ ಭಾರತಕ್ಕಾಗಿ ಜನಾಂದೋಲನ ರೂಪುಗೊಂಡಿದ್ದು, ಧಾರವಾಡ ಜಿಲ್ಲೆಯಲ್ಲಿ ಚಿಕಿತ್ಸೆ ಶೇ. 88ರಷ್ಟು ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಕ್ಷಯ ರೋಗ ನಿಮೂಲನೆ ಕುರಿತು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಕರ್ನಾಟಕ ಮತ್ತು ಕೇರಳ ಸಂಸದರೊಂದಿಗೆ ದೆಹಲಿಯಲ್ಲಿ ಆಯೋಜಿಸಿದ್ದ ಸಮಾಲೋಚನೆ ಸಭೆಯಲ್ಲಿ ಧಾರವಾಡ ಲೋಕಸಭೆ ಸದಸ್ಯರೂ ಆಗಿರುವ ಸಚಿವ ಪ್ರಲ್ಹಾದ ಜೋಶಿ ಈ ವಿಷಯ ತಿಳಿಸಿದ್ದಾರೆ.
ಕ್ಷಯ ರೋಗ ನಿಮೂಲನೆಯಲ್ಲಿ ಧಾರವಾಡ ಜಿಲ್ಲೆ ಮಹತ್ತರ ಪ್ರಗತಿ ಸಾಧಿಸುತ್ತಿದ್ದು, 72 ಗ್ರಾಮ ಪಂಚಾಯಿತಿಗಳು ಟಿಬಿ ಮುಕ್ತ ಗ್ರಾಮ ಪಂಚಾಯಿತಿಗಳಾಗಿವೆ ಎಂದು ತಿಳಿಸಿದರು.
ಧಾರವಾಡ ಲೋಕಸಭೆ ಕ್ಷೇತ್ರ ಕ್ಷಯ ರೋಗ ನಿಮೂಲನೆಯಲ್ಲಿ ಮಹತ್ವದ ಪ್ರಗತಿ ಸಾಧಿಸುತ್ತಿದೆ. 2023ರಲ್ಲಿ ಕೇವಲ ಎರಡೇ ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಳು ಇದ್ದವು. ಈಗ 72 ಗ್ರಾಮ ಪಂಚಾಯಿತಿಗಳು ಕ್ಷಯ ಮುಕ್ತವಾಗಿವೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಬದ್ಧತೆ ಹಾಗೂ ಜಿಲ್ಲಾಡಳಿತದ ಸತತ ಶ್ರಮದಿಂದಾಗಿ ಧಾರವಾಡ ಜಿಲ್ಲೆ ಸಂಪೂರ್ಣ ಕ್ಷಯ ರೋಗ ಮುಕ್ತವಾಗುತ್ತ ದಾಪುಗಾಲಿರಿಸಿದೆ.
130 ದಿನಗಳಲ್ಲಿ 161 ಎಕ್ಸ್ ರೇ ಶಿಬಿರಗಳನ್ನು ಆಯೋಜಿಸಿ, 7,800ಕ್ಕೂ ಹೆಚ್ಚು ಜನರ ತಪಾಸಣೆ ನಡೆಸಲಾಗಿದೆ ಎಂದು ತಿಳಿಸಿದರು.

2026ರ ಜನವರಿಜುಲೈ ಅವಧಿಯಲ್ಲಿ ನಿಗದಿತ ಗುರಿ ಮೀರಿ ಶೇ. 124ರಷ್ಟು (43,840 ಜನರು) ಸ್ಕ್ರೀನಿಂಗ್ ಮಾಡಲಾಗಿದೆ. ಜಿಲ್ಲೆಯಲ್ಲಿ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಸಧ್ಯ ಶೇ. 88ರಷ್ಟಿದೆ ಎಂದು ಹೇಳಿದರು.

ಟಿಬಿ ಮುಕ್ತ ಗುರಿ ತಲುಪಲು ‘ನಿಕ್ಷಯ್ ಮಿತ್ರ’ ಯೋಜನೆ ಮೂಲಕ ರೋಗಿಗಳಿಗೆ ಪೌಷ್ಟಿಕಾಂಶದ ಬೆಂಬಲ ನೀಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ‘ಕ್ಷಯ ಮುಕ್ತ ಭಾರತ’ದ ಕನಸನ್ನು ಸಾಕಾರಗೊಳಿಸಲು ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಸದಾ ಬದ್ಧರಾಗಿದ್ದೇವೆ ಎಂದು ಸಚಿವ ಪ್ರಲ್ಹಾದ ಜೋಶಿ ಭರವಸೆ ವ್ಯಕ್ತಪಡಿಸಿದರು.

ಕ್ಷಯ ರೋಗ ಚಿಕಿತ್ಸೆಗೆ ಸಂಬಂಧಿಸಿದಂತೆ ಸ್ವದೇಶಿ ಸಂಶೋಧನೆ, ಎಐ ಆಧಾರಿತ ತಪಾಸಣೆ ಹಾಗೂ ರೋಗಿಗಳಿಗೆ ಉತ್ತಮ ಆಧುನಿಕ ಚಿಕಿತ್ಸೆ ಸೌಲಭ್ಯ ಕಲ್ಪಿಸುವ ಮೂಲಕ ಟಿಬಿ ಮುಕ್ತ ಭಾರತದ ಧ್ಯೇಯಕ್ಕೆ ಎರಡೂ ರಾಜ್ಯಗಳ ಸಂಸದರು ಸಂಕಲ್ಪ ಮಾಡಿದರು.

ಕೇಂದ್ರದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸುರೇಶ ಗೋಪಿ, ಅನುಪ್ರಿಯ ಪಟೇಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.