ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸಚಿವ ಸಂತೋಷ ಲಾಡ್ ಶುಭ ಕೋರಿದರು.
ಧಾರವಾಡ: ನಗರದ ಕರ್ನಾಟಕ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಒಟ್ಟು 3,085 ಅಭ್ಯಥಿರ್ಗಳು ಭಾಗವಹಿಸಿದ್ದರು. ವಿವಿಧ ೇತ್ರಗಳ 122 ಕಂಪನಿಗಳು, ಮೇಳದಲ್ಲಿ ಅಭ್ಯಥಿರ್ಗಳ ನೇರ ಸಂದರ್ಶನ ನಡೆಸಿದರು.
ಪ್ರಾಥಮಿಕ ಹಂತದ ಪರಿಶೀಲನೆಯ ನಂತರ 1,253 ಅಭ್ಯಥಿರ್ಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು, 719 ಅಭ್ಯಥಿರ್ಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡಿ, ಸ್ಥಳದಲ್ಲಿಯೇ ಆರ್ ಲೇಟರ್ ನೀಡಲಾಯಿತು.
ಉದ್ಯೋಗ ಮೇಳದಲ್ಲಿ ಐಟಿ, ಉತ್ಪಾದನಾ- ಮಾರಾಟ, ಬ್ಯಾಂಕಿಂಗ್, ಶಿಣ ಸೇರಿ ವಿವಿದ ವಿಭಾಗಗಳ ಕಂಪನಿಗಳು ಭಾಗವಹಿಸಿದ್ದವು. ಅಭ್ಯಥಿರ್ಗಳು ತಮ್ಮ ಅರ್ಹತೆ ಮತ್ತು ಆಸಕ್ತಿಗೆ ಅನುಗುಣವಾಗಿ ವಿವಿಧ ಸಂಸ್ಥೆಗಳ ಸಂದರ್ಶನದಲ್ಲಿ ಪಾಲ್ಗೊಂಡರು.