Railway ನೈಋತ್ಯ ರೈಲ್ವೆ ವಲಯ ವತಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ 70ನೇ ರೈಲ್ವೆ ಸಪ್ತಾಹ ಆಚರಣೆ ಸಮಾರಂಭದಲ್ಲಿ ಹುಬ್ಬಳ್ಳಿ ಹಾಗೂ ಬೆಂಗಳೂರು ರೈಲ್ವೆ ವಿಭಾಗಗಳಿಗೆ ಸಮಗ್ರ ದಕ್ಷತಾ ಪ್ರಶಸ್ತಿಯನ್ನು ವಲಯದ ಜಿಎಂ ಮುಕುಲ್ ಸರನ್ ಮಾಥುರ್ ಪ್ರದಾನ ಮಾಡಿದರು. 
ಧಾರವಾಡ

Railway ನೈಋತ್ಯ ರೈಲ್ವೆಯಿಂದ 70ನೇ ರೈಲ್ವೆ ಸಪ್ತಾಹ ಆಚರಣೆ

ಪ್ರಮುಖ ಮುಖ್ಯಾಂಶಗಳು

  • ಹುಬ್ಬಳ್ಳಿ, ಬೆಂಗಳೂರು ವಿಭಾಗಗಳಿಗೆ ಸಮಗ್ರ ದಕ್ಷತೆ ಅವಾರ್ಡ್
  • 41 ಸಿಬ್ಬಂದಿಗೆ ವಿಶಿಷ್ಟ ರೈಲ್ ಸೇವಾ ಪುರಸ್ಕಾರ
  • 21 ನೌಕರರಿಗೆ ರೈಲ್ ಸೇವಾ ಪುರಸ್ಕರ
ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಮತ್ತು ಬೆಂಗಳೂರು ರೈಲ್ವೆ ವಿಭಾಗಗಳು ಸಮಗ್ರ ದಕ್ಷತೆ ಪ್ರಶಸ್ತಿ ಪಡೆದುಕೊಂಡವು. ಉತ್ತಮ ಸೇವೆ ಸಲ್ಲಿಸಿದ ನೈಋತ್ಯ ರೈಲ್ವೆಯ 41 ಸಿಬ್ಬಂದಿಗೆ ವಿಶಿಷ್ಟ ರೈಲ್ ಸೇವಾ ಪುರಸ್ಕಾರ ಹಾಗೂ 21 ನೌಕರರಿಗೆ ರೈಲ್ ಸೇವಾ ಪುರಸ್ಕರ ನೀಡಲಾಯಿತು.
ಕರ್ತವ್ಯದಲ್ಲಿ ಅಪ್ರತಿಮ ದಕ್ಷತೆ ಮೆರೆದ 31 ಜನ ಸಿಬ್ಬಂದಿಗೆ ಮೆರಿಟ್ ಪ್ರಮಾಣಪತ್ರಗಳನ್ನು ನೀಡಿ, ಗೌರವಿಸಲಾಯಿತು.
2024-25ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ವಿವಿಧ ವಿಭಾಗಗಳಿಗೆ ಒಟ್ಟು 25 ದಕ್ಷತಾ ಶೀಲ್ಡ್​ಗಳನ್ನು ನೀಡಲಾಯಿತು.
ಇದರಲ್ಲಿ ಬೆಂಗಳೂರು ವಿಭಾಗದ ಲೆಕ್ಕ ವಿಭಾಗ, ವಾಣಿಜ್ಯ, ವಿದ್ಯುತ್, ಸಿಬ್ಬಂದಿ, ಭದ್ರತೆ, ಅಂತರ ವಿಭಾಗೀಯ ಸುರಕ್ಷತೆ ಹಾಗೂ ಪ್ರಮುಖ ಕಾರ್ಯಕ್ಷಮತೆ ಸೂಚಕ ಶೀಲ್ಡ್​ಗಳನ್ನು ತನ್ನದಾಗಿಸಿಕೊಂಡಿದೆ.
ಹುಬ್ಬಳ್ಳಿ ವಿಭಾಗದ ಕಾರ್ಯುಚರಣೆ, ಅಂತರವಿಭಾಗೀಯ ರಾಜಭಾಷಾ ರೋಲಿಂಗ್ ಶೀಲ್ಡ್, ರೈಲ್ ಮದದ್ ಹಾಗೂ ನವೀನ ಆವಿಷ್ಕಾರ ವಿಭಾಗಗಳಲ್ಲಿ ದಕ್ಷತಾ ಶೀಲ್ಡ್​ಗಳನ್ನು ಗೆದ್ದುಕೊಂಡಿದೆ.
ಮೈಸೂರು ವಿಭಾಗದ ಯಾಂತ್ರಿಕ, ಸಿಗ್ನಲ್ ಮತ್ತು ದೂರಸಂಪರ್ಕ, ವಿದ್ಯುತ್ ಟಿಆರ್​ಡಿ ವಿತರಣೆ ಮತ್ತು ಕಾರ್ಯುಗಾರ ವಿಭಾಗಗಳಲ್ಲಿ ದಕ್ಷತಾ ಶೀಲ್ಡ್ಗಳನ್ನು ಪಡೆದಿದೆ.
ಸ್ಕ್ರಾ್ಯಪ್ ಕಾರ್ಯಕ್ಷಮತೆಯ ಶೀಲ್ಡ್: ಮೈಸೂರು ವಿಭಾಗ ಹಾಗೂ ಜನರಲ್ ಸ್ಟೋರ್ಸ್ ಡಿಪೋ, ಹುಬ್ಬಳ್ಳಿ ವರ್ಕ್​ಶಾಪ್ ಕಾರ್ಯಕ್ಷಮತಾ ಶೀಲ್ಡ್ ಹಾಗೂ ಮೈಸೂರು ಕೇಂದ್ರೀಯ ಕಾರ್ಯುಗಾರಕ್ಕೆ ಅತ್ಯುತ್ತಮ ಕಾರ್ಯುಗಾರ ಪ್ರಶಸ್ತಿ ಲಭಿಸಿದೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಹುಬ್ಬಳ್ಳಿ ಮತ್ತು ಮೈಸೂರು ವಿಭಾಗಗಳು ಜಂಟಿಯಾಗಿ ಪ್ರಶಸ್ತಿ ಹಂಚಿಕೊಂಡಿವೆ.ವೈದ್ಯಕೀಯ ವಿಭಾಗದಲ್ಲಿ ಹುಬ್ಬಳ್ಳಿ ಕೇಂದ್ರ ರೈಲ್ವೆ ಆಸ್ಪತ್ರೆ ಮತ್ತು ಹುಬ್ಬಳ್ಳಿ ವಿಭಾಗದ ಆರೋಗ್ಯ ಘಟಕಗಳು, ಸ್ಟೋರ್ಸ್ ಶೀಲ್ಡ್ ಪ್ರಶಸ್ತಿಯನ್ನು ಹುಬ್ಬಳ್ಳಿಯ ಯಾಂತ್ರಿಕ ಸ್ಟೋರ್ಸ್ ಡಿಪೋ ಮತ್ತು ಜನರಲ್ ಸ್ಟೋರ್ಸ್ ಡಿಪೋ ಪಡೆದುಕೊಂಡಿವೆ.
ಅತ್ಯುತ್ತಮ ನಿರ್ವಹಣಾ ನಿಲ್ದಾಣಗಳ ಪ್ರಶಸ್ತಿಯನ್ನು ಪ್ರಮುಖ ನಿಲ್ದಾಣ ವಿಭಾಗದಲ್ಲಿ ಧಾರವಾಡ ಹಾಗೂ ಸಣ್ಣ ನಿಲ್ದಾಣ ವಿಭಾಗದಲ್ಲಿ ಶ್ರವಣಬೆಳಗೊಳ ನಿಲ್ದಾಣಗಳು ತನ್ನದಾಗಿಸಿಕೊಂಡಿವೆ.
ರೈಲು ಮತ್ತು ಲೊಕೊ ಶೆಡ್: ಹುಬ್ಬಳ್ಳಿ ವಿಭಾಗದ ಹುಬ್ಬಳ್ಳಿಚೆನೈ ಎಕ್ಸ್​ಪ್ರೆಸ್ ಅತ್ಯುತ್ತಮ ರೈಲು ಹಾಗೂ ಬೆಂಗಳೂರು ವಿಭಾಗದ ಕೃಷ್ಣರಾಜಪುರಂ ಡೀಸೆಲ್ ಶೆಡ್ ಅತ್ಯುತ್ತಮ ಶೆಡ್ ಪ್ರಶಸ್ತಿಗೆ ಪಾತ್ರವಾಗಿವೆ.
ಹುಬ್ಬಳ್ಳಿಯ ಉಪ ಮುಖ್ಯ ಇಂಜಿನಿಯರ್ (ನಿಮಾಣ) ವಿಭಾಗಕ್ಕೆ ಅತ್ಯುತ್ತಮ ನಿಮಾಣ ವಿಭಾಗ ಹಾಗೂ ಹುಬ್ಬಳ್ಳಿ ರನ್ನಿಂಗ್ ರೂಮ್ೆ ಅತ್ಯುತ್ತಮ ನಿರ್ವಹಣಾ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ವಿತರಿಸಿ ಮಾತನಾಡಿದ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್, ಸಿಬ್ಬಂದಿ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಅಚಲ ಬದ್ಧತೆಯನ್ನು ಶ್ಲಾಘಿಸಿದರು.
ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ, ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ ಕುಮಾರ ಸಿಂಗ್, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ಸಂಜೀಲಾ ಮಾಥುರ್ ಹಾಗೂ ಇತರರು ಇದ್ದರು.