book release ಹುಬ್ಬಳ್ಳಿಯ ಸಪ್ನ ಬುಕ್​ ಹೌಸ್​ನಲ್ಲಿ ಶನಿವಾರ 70 ಕನ್ನಡ ಪುಸ್ತಕಗಳನ್ನು ಸಾಹಿತಿ ಹೇಮಾ ಪಟ್ಟಣಶೆಟ್ಟಿ ಲೋಕಾರ್ಪಣೆ ಮಾಡಿದರು. ಡಾ. ಲಿಂಗರಾಜ ಅಂಗಡಿ, ಮೇಘನಾ ಇದ್ದರು. 
ಧಾರವಾಡ

book release ಸರ್ಕಾರ ಪುಸ್ತಕ ನೀತಿ ರೂಪಿಸಬೇಕು

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ, ಪ್ರಕಾಶಕಿ ಹೇಮಾ ಪಟ್ಟಣಶೆಟ್ಟಿ ಸಲಹೆ
  • ಸಪ್ನ ಬುಕ್​ ಹೌಸ್​ನಲ್ಲಿ 70 ಕನ್ನಡ ಪುಸ್ತಕಗಳ ಲೋಕಾರ್ಪಣೆ
  • ಲೇಖಕ, ಪ್ರಕಾಶಕ, ಓದುಗರನ್ನು ಒಂದುಗೂಡಿಸುವ ಕೆಲಸ
ಇಲ್ಲಿಯ ಕೋಯಿನ್​ ರಸ್ತೆಯಲ್ಲಿರುವ ಸಪ್ನ ಬುಕ್​ ಹೌಸ್​ನಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಪ್ನ ಪ್ರಕಟಿಸಿರುವ 70 ಕನ್ನಡ ಪುಸ್ತಕಗಳ ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪುಸ್ತಕಗಳ ಮಾರಾಟ ವ್ಯವಸ್ಥೆಯನ್ನು ಸರಿಪಡಿಸಬೇಕು. ಗ್ರಂಥಾಲಯಗಳ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು. ಪುಸ್ತಕ ನೀತಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಪುಸ್ತಕ ಓದುವುದರಿಂದಲೇ ಜ್ಞಾನ ಹೆಚ್ಚಾಗುತ್ತದೆ. ಹಾಗಾಗಿ ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಬೇಕು. ಮೊಬೈಲ್​ ಯುಗದಲ್ಲಿ ಓದುವುದನ್ನು ರೂಢಿಸಿಕೊಳ್ಳುವುದು ಸವಾಲಿನ ಕೆಲಸವಾದರೂ ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸಲು ಇದು ಇಂದಿನ ಅಗತ್ಯ ಎಂದರು.
ಪುಸ್ತಕ ಓದುವುದರಿಂದ ಮನುಷ್ಯನ ಮನಸ್ಸು ಅರಳುತ್ತದೆ. ಅಹಿತಕರ ಘಟನೆಗಳಿಗೆ ಅವಕಾಶ ಇರುವುದಿಲ್ಲ. ಮನೆಯಿಂದಲೇ ಬದಲಾವಣೆ ಆರಂಭವಾಗಬೇಕು ಎಂದರು.
ಸಪ್ನ ಬುಕ್​ ಹೌಸ್​ನ ಮೇಘನಾ ಕಾರ್ಯಕ್ರಮ ನಿರ್ವಹಿಸಿದರು. ಸಾಹಿತ್ಯಾಸಕ್ತರು, ಸಾಹಿತಿಗಳು, ಓದುಗರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.