ಧಾರವಾಡದ ಅಂಜುಮನ್ ಕಾಂಪ್ಲೆಕ್ಸ್ ಬಳಿ ಬಿಆರ್ಟಿಎಸ್ ಬಸ್ ಡಿಕ್ಕಿಯಿಂದ ನಜ್ಜುಗುಜ್ಜಾದ ಬೈಕ್ಗಳು.
ಧಾರವಾಡ: ನಗರದ ಬಿಆರ್ಟಿಎಸ್ ಟರ್ಮಿನಲ್ ಬಳಿ ನಿಲ್ಲಿಸಿದ್ದ ಬಿಆರ್ಟಿಎಸ್ ಚಿಗರಿ ಬಸ್ ಮುಂದೆ ಚಲಿಸಿದ ಪರಿಣಾಮ ಪಾದಚಾರಿ ಗಾಯಗೊಂಡು, ರಸ್ತೆ ಬದಿ ನಿಲ್ಲಿಸಿದ್ದ 5 ಬೈಕ್ಗಳು ಹಾಗೂ 2 ಅಂಗಡಿಗಳು ಜಖಂಗೊಂಡ ಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಬಿಆರ್ಟಿಎಸ್ ಟರ್ಮಿನಲ್ ನಲ್ಲಿ ಹೆಚ್ಚಿನ ಚಿಗರಿ ಬಸ್ಗಳಿದ್ದ ಕಾರಣ ಚಾಲಕ ಹೊರಗಡೆ ಬಸ್ ನಿಲ್ಲಿಸಿ ಹೋಗಿದ್ದ ಎನ್ನಲಾಗಿದೆ. ಹ್ಯಾಂಡ್ ಬ್ರೇಕ್ ಹಾಕದ ಕಾರಣ ಇಳಿಜಾರಿನಲ್ಲಿದ್ದ ಬಸ್ ಏಕಾಏಕಿ ಮುಂದೆ ಚಲಿಸಿದೆ. ಅಂಜುಮನ್ ಕಾಂಪ್ಲೆಕ್ಸ್ ಎದುರು ನಡೆದು ಹೋಗುತ್ತಿದ್ದ ನಗರದ ಹೆಬ್ಬಳ್ಳಿ ಅಗಸಿ ನಿವಾಸಿ ಬಸವರಾಜ ತಡಕೋಡ ಎಂಬಾತನಿಗೆ ಡಿಕ್ಕಿ ಹೊಡೆದಿದೆ. ಆತನ ಕೈ, ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಸ್ಥಳಿಯರು ರಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಟನೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ 5 ಬೈಕ್ಗಳು ಜಖಂಗೊಂಡಿವೆ. ಅಲ್ಲದೆ, ರಸ್ತೆ ಬದಿ ಇದ್ದ 2 ಬ್ಯಾಗ್ ರಿಪೇರಿ ಅಂಗಡಿಗಳಿಗೂ ಹಾನಿಯಾಗಿದೆ.
ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆ ಪೊಲೀಸರು ಸಂಚಾರ ಸುಗಮಗೊಳಿಸಿದರು. ಈ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.