ಅಪರಿಚಿತರು cyber case ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 8.32 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. 
ಧಾರವಾಡ

45.08 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ

ಹುಬ್ಬಳ್ಳಿ: ಹೂಡಿಕೆಯಲ್ಲಿ ಪ್ರತಿದಿನ ಶೇ. 5 ಹಾಗೂ ಐಪಿಒ ಅಲಾಟ್‌ಗೆ ಶೇ. 40ರಷ್ಟು ಲಾಭ ಕೊಡುವುದಾಗಿ ನಂಬಿಸಿದ ವಂಚಕರು, ನಗರದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 45.08 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಅನಿಲ್ ಎಂ. ವಂಚನೆಗೆ ಒಳಗಾಗಿದ್ದಾರೆ. ಅನಿಲ್ ಕಾಲೇಜಿನಲ್ಲಿದ್ದಾಗ ಇನ್‌ಸ್ಟಾಗ್ರಾಮ್‌ನಲ್ಲಿ ಬಿಎನ್‌ಪಿ ಪಾರಿಬಸ್‌ಬಿಟಿ ಎಸ್‌ಟಿ ಕೋ ಇನ್‌ವೆಸ್ಟ್ಮೆಂಟ್ ಪ್ಲಾನ್ ಎಂಬುದನ್ನು ಕ್ಲಿಕ್ ಮಾಡಿದ್ದಾರೆ. ಲಿಂಕ್‌ನಿಂದ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಜಾಯಿನ್ ಮಾಡಿಸಿದ್ದು, ಇನ್‌ವೆಸ್ಟ್‌ಮೆಂಟ್ ಪ್ಲಾನ್ ಎಂದು ಹೇಳಿ ಪರಿಚಯಿಸಿದ್ದಾರೆ. ನಂತರ ಪ್ರತಿದಿನ ಶೇ. 5 ಹಾಗೂ ಐಪಿಒ ಅಲಾಟ್‌ಗೆ ಶೇ. 40ರಷ್ಟು ಲಾಭ ಕೊಡುವುದಾಗಿ ನಂಬಿಸಿ ಹಂತ ಹಂತವಾಗಿ 45.08 ಲಕ್ಷ ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಅನಿಲ್, ಸಿಇಎನ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.