ಧಾರವಾಡದಲ್ಲಿ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟದ ರೂಪುರೇಷೆ ಕುರಿತು ಹಿರಿಯ ಹೋರಾಟಗಾರ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ಸಭೆ ಜರುಗಿತು.
ಧಾರವಾಡ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಜು. 30 ಗಡುವು ನೀಡಲಾಗಿದೆ. ಈ ಬೇಡಿಕೆ ಈಡೇರದಿದ್ದರೆ ಆ. 3ರಿಂದ ಧರಣಿ ನಡೆಸಲಾಗುವುದು ಎಂದು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಗಾರರು ಘೋಷಿಸಿದರು.
ನಗರದಲ್ಲಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಯಿಂದ ಈ ಗಟ್ಟಿ ನಿರ್ಧಾರ ಕೈಗೊಳ್ಳಲಾಯಿತು. ಹಿರಿಯ ಹೋರಾಟಗಾರ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆ. 3ರ ಬೆಳಗ್ಗೆ 10ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯ ಪ್ರತಿಪಾದನಾ ಹೋರಾಟ ಆರಂಭಿಸಲು ತೀರ್ಮಾನಿಸಲಾಯಿತು.
ಬಿ.ಡಿ. ಹಿರೇಮಠ ಮಾತನಾಡಿ, ಈಗಾಗಲೇ ರಾಜ್ಯಪಾಲರು ಅಂಕಿತ ಹಾಕಿದ್ದು, ಮುಖ್ಯಮಂತ್ರಿಗಳೂ ಬೇಡಿಕೆಗೆ ಸ್ಪಂದಿಸಿದ್ದಾರೆ. ಹೀಗಾಗಿ ಅಧಿಕೃತ ೂಷಣೆಗೆ ಜು. 30ರವರೆಗೆ ಗಡುವು ನೀಡೋಣ. ಈ ಹಿಂದೆ ಬೆಂಬಲಿಸಿದಂತೆ ಪಾತೀತವಾಗಿ ಎಲ್ಲರೂ ಹೋರಾಟದಲ್ಲಿ ಭಾಗವಹಿಸಬೇಕು. ಗುರಿ ಮುಟ್ಟುವವರೆಗೆ ನಮ್ಮ ಹೋರಾಟ ನಿಲ್ಲದು ಎಂದರು.
ಹೋರಾಟಗಾರ ಶಿವಶಂಕರ ಹಂಪಣ್ಣವರ ಮಾತನಾಡಿ, ಪ್ರತ್ಯೇಕ ಮಹಾನಗರ ಪಾಲಿಕೆಗೆ ವಿರೋಧ ಮಾಡುತ್ತಿರುವವರ ಬಗ್ಗೆ ಗಮನ ಬೇಡ. ನಮ್ಮ ಹೋರಾಟದತ್ತ ಗಮನ ಹರಿಸೋಣ. ಕಾನೂನು ಸಚಿವರ ನೇಮಕ ಆಗುವವರೆಗೆ ಕಾಯಬೇಕು ಎಂದರು.
ಹೋರಾಟಗಾರರಾದ ವೆಂಕಟೇಶ ಮಾಚಕನೂರ, ಡಾ. ಸಂಜೀವ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಹಾದೇವ ಹೊರಟ್ಟಿ, ಶಂಕರ ನೀರಾವರಿ, ಮಾಜಿ ಮೇಯರ್ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಅರವಿಂದ ಏಗನಗೌಡರ, ನಾಗರಾಜ ಗೌರಿ, ರಾಜು ಕಮತಿ, ಕವಿತಾ ಕಬ್ಬೇರ, ದಾನಪ್ಪ ಕಬ್ಬೇರ, ಈಶ್ವರ ಶಿವಳ್ಳಿ, ಲಕ್ಷ$್ಮಣ ದೊಡ್ಡಮನಿ, ಲಕ್ಷ$್ಮಣ ಬಕ್ಕಾಯಿ, ಸುಧೀರ ಮುಧೋಳ, ರವಿ ಮಾಳಗೇರ, ಇತರರಿದ್ದ್ದರು.