ಧಾರವಾಡ: ಪರವಾನಗಿಗಿಂತ ಹೆಚ್ಚಿನ ಎಂ. ಸ್ಯಾಂಡ್ ಸಾಗಿಸುತ್ತಿದ್ದ 3 ಟಿಪ್ಪರ್ಗಳ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸೋಮವಾರ ಜಪ್ತಿ ಮಾಡಿದ್ದಾರೆ. ಗದಗ ಜಿಲ್ಲೆ ಮುಂಡರಗಿಯಿಂದ ಧಾರವಾಡ ತಾಲೂಕಿನ ಹೊಸವಾಳಕ್ಕೆ 3 ಟಿಪ್ಪರ್ಗಳಲ್ಲಿ ಎಂ. ಸ್ಯಾಂಡ್ ಸಾಗಿಸಲಾಗುತ್ತಿತ್ತು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಹೇಶ ಗೌಡನಾಯ್ಕರ್ ಹಾಗೂ ತಂಡ ದಾಳಿ ನಡೆಸಿ ತಪಾಸಣೆ ಮಾಡಿದಾಗ ಪರವಾನಗಿಗಿಂತ ಹೆಚ್ಚಿನ ಎಂ. ಸ್ಯಾಂಡ್ ಸಾಗಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನಿತಿನ್ ಉಪ್ಪಾರ ಎಂಬುವರ 3 ಟಿಪ್ಪರ್ಗಳ್ನು ಜಪ್ತಿ ಮಾಡಿ ಗರಗ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.