ಧಾರವಾಡ ಹೈಕೋರ್ಟ್​ ಪೀಠದಲ್ಲಿ ರಾಷ್ಟ್ರೀಯ ಲೋಕ ಅದಾಲತ್​. 
ಧಾರವಾಡ

ಹೈಕೋರ್ಟ್​ನಲ್ಲಿ 201 ಪ್ರಕರಣ ಇತ್ಯರ್ಥ

ಧಾರವಾಡ: ಇಲ್ಲಿನ ಹೈಕೋರ್ಟ್​ ಪೀಠದಲ್ಲಿ ರಾಷ್ಟ್ರೀಯ ಲೋಕ ಅದಾಲತ್​ ನಡೆಸಲಾಯಿತು. ನ್ಯಾಯಮೂರ್ತಿ ವೆಂಕಟೇಶ ನಾಯ್ಕ್​ ಟಿ. ಮತ್ತು ಟಿ.ಎಂ. ನದಾಫ್​ ಅವರೊಂದಿಗೆ ಲೋಕ ಅದಾಲತ್​ ಸದಸ್ಯರಾದ ಹನುಮಂತರೆಡ್ಡಿ ಸಾಹುಕಾರ ಮತ್ತು ಎಸ್​.ಎಸ್​. ಬಾದವಡಗಿ ಅವರನ್ನೊಳಗೊಂಡ 2 ಪೀಠಗಳನ್ನು ಆಯೋಜಿಸಲಾಗಿತ್ತು. ಒಟ್ಟು 660 ಪ್ರಕರಣಗಳನ್ನು ವಿಚಾರಣೆಗೊಳಪಡಿಸಿ 201 ಪ್ರಕರಣಗಳನ್ನು 4,55,63,000 ರೂಪಾಯಿ ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.