cities ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.
- ಪ್ರತ್ಯೇಕ ಪಾಲಿಕೆ ಭಾವನಾತ್ಮಕ ವಿಷಯವಾಗದಿರಲಿ.
- ಜನಸಂಖ್ಯೆ ಹೆಚ್ಚು ಇದ್ದಷ್ಟು ಅನುದಾನ ಹೆಚ್ಚು ಬರುತ್ತದೆ.
- ಧಾರವಾಡಕ್ಕೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆಯೂ ಚರ್ಚೆ ನಡೆಯಬೇಕು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಪ್ರತ್ಯೇಕಿಸಿದರೆ ಕೇಂದ್ರದ ನಿಯಮದಡಿ ಅನುದಾನ ಬರುವುದು ಕಷ್ಟವಾಗುತ್ತದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಜನಸಂಖ್ಯೆ ಹೆಚ್ಚು ಇದ್ದಷ್ಟು ಅನುದಾನ ಹೆಚ್ಚು ಬರುತ್ತದೆ ಎಂದರು.
ಪಾಲಿಕೆ ಇಬ್ಭಾಗದ ವಿಷಯವನ್ನು ಭಾವನಾತ್ಮಕವಾಗಿ ಪರಿಗಣಿಸದೆ, ಸಮಗ್ರ ಚರ್ಚೆ ಆಗಬೇಕು. ಇದರೊಂದಿಗೆ ಧಾರವಾಡಕ್ಕೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆಯೂ ಚರ್ಚೆ ನಡೆಯಬೇಕು ಎಂದು ತಿಳಿಸಿದರು.
ಮುಂದಿನ 10 ವರ್ಷಗಳಲ್ಲಿ ಟೈರ್ 2 ಮತ್ತು 3 ನಗರಗಳನ್ನು ಅಭಿವೃದ್ಧಿಗೊಳಿಸಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಇತರ ಸೌಕರ್ಯಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡಲಿದೆ ಎಂದರು.