ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಶ್ರೀ ಶಾರದಾಮಾತಾ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಶಾರದಾಮಾತೆಯ 173ನೇ ಜಯಂತಿಯಲ್ಲಿ ಸಾಧಕರನ್ನು ಗೌರವಿಸಲಾಯಿತು. ಮಾತೋಶ್ರೀ ತೇಜೋಮಯಿ ಮಾತಾಜಿ, ಶಶಿರೇಖಾ ಚಕ್ರಸಾಲಿ, ವಾಣಿ ಪುರೋಹಿತ, ಇತರರಿದ್ದರು.
ಉಪ್ಪಿನಬೆಟಗೇರಿ: ಸಮಾಜದಲ್ಲಿ ಮಹಿಳೆಯರು ಸಬಲೀಕರಣ ಹೊಂದಲು ಕುಟುಂಬ ನಿರ್ವಹಣೆ ಜತೆಗೆ ಜ್ಞಾನ ಮತ್ತು ಶಕ್ತಿಗನುಗುಣವಾಗಿ ಸತ್ಕಾರ್ಯ ಮಾಡಬೇಕು ಎಂದು ರ್ಯಾಪಿಡ್ ಸಂಸ್ಥೆಯ ಕಾರ್ಯದರ್ಶಿ ವಾಣಿ ಪುರೋಹಿತ ಹೇಳಿದರು.
ಅವರು ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಶ್ರೀ ಶಾರದಾಮಾತಾ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಶಾರದಾಮಾತೆಯ 173ನೇ ಜಯಂತಿಯಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪಿಡಿಒ ಶಶಿರೇಖಾ ಚಕ್ರಸಾಲಿ ಮಾತನಾಡಿ, ಬೆಳೆಯುವ ಮಕ್ಕಳ ಯಶಸ್ವಿ ಜೀವನಕ್ಕಾಗಿ ತಾಯಿಯೇ ಮೊದಲ ಗುರು. ಆದ್ದರಿಂದ ಮಕ್ಕಳಿಗಾಗಿ ಸಮಯ ಮೀಸಲಿಟ್ಟು ಉತ್ತಮ ಭವಿಷ್ಯ ರೂಪಿಸಿ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ ಹುಬ್ಬಳ್ಳಿಯ ಶ್ರೀ ಪ.ಪೂ ಮಾತೋಶ್ರೀ ತೇಜೋಮಯಿ ಮಾತಾಜಿ ಮಾತನಾಡಿ, ಶ್ರೀ ಶಾರದಾದೇವಿ ಅವರ ಜೀವನ ನಮಗೆ ಆದರ್ಶ. ಶಾರದಾಮಾತಾಜಿ ಅವರ ಜೀವನ ಚರಿತ್ರೆ ಅಧ್ಯಯನ ಮಾಡಿ ಮೈಗೂಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಆಗುತ್ತವೆ ಎಂದು ತಿಳಿಸಿದರು. ಇದೇ ವೇಳೆ 250 ತಂದೆ-ತಾಯಿಯರ ಪಾದಪೂಜೆ ನೆರವೇರಿತು.
ಈ ಸಂದರ್ಭವದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.99 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಚೈತ್ರಾ ಮಾತಾಜಿ, ಸವಿತಾ ಮಾತಾಜಿ, ಶಾಂತಾ ಮಾತಾಜಿ ಕಾರ್ಯಕ್ರಮ ನಿರ್ವಹಿಸಿದರು.