ಧಾರವಾಡ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿoದ ದೊರಕುವ ಸೌಲಭ್ಯ ಗಿಟ್ಟಿಸಿಕೊಳ್ಳುವುದಕ್ಕೆ ಬೋಗಸ್ ಕಾರ್ಡ್ಗಳು ಸೃಷ್ಟಿಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕಾರ್ಮಿಕ ಇಲಾಖೆ ಮುಂದಾಗಿದೆ.
2025ರ ಮಾಹಿತಿ ಅನುಸಾರ ಜಿಲ್ಲೆಯಲ್ಲಿ ಒಟ್ಟು 2,01,651 ನೋಂದಾಯಿತ ಕಾರ್ಮಿಕರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಕಾರ್ಡ್ದಾರರಿಗೆ ಅಪಘಾತ ವಿಮೆ, ಮಕ್ಕಳ ಮದುವೆಗೆ ಪ್ರೋತ್ಸಾಹ ಸೇರಿ ಹಲವು ರೀತಿಯ ನೆರವು ಸರ್ಕಾರದಿಂದ ಸಿಗುತ್ತಿದೆ. ಈ ಸೌಲಭ್ಯ ಪಡೆಯುವ ಸಲುವಾಗಿ ಅನ್ಯಮಾರ್ಗದಿಂದ ಅನರ್ಹರು ಕೂಡ ಕಾರ್ಡ್ ಹೊಂದಿದ್ದಾರೆ. ಇದಕ್ಕೆ ಇಲಾಖೆ ಕಡಿವಾಣ ಹಾಕುತ್ತಿದೆ.
ಜಿಲ್ಲೆಯಲ್ಲಿ 13,401 ಬೋಗಸ್ ಕಾರ್ಡ್ಗಳನ್ನು ಪತ್ತೆ ಹಚ್ಚಿ ಅವುಗಳನ್ನು ರದ್ದುಪಡಿಸಲಾಗಿದೆ. ಧಾರವಾಡ ತಾಲೂಕಿನಲ್ಲಿ 2,257, ಹುಬ್ಬಳ್ಳಿ ತಾಲೂಕಿನಲ್ಲಿ 4,003, ಅಳ್ನಾವರ ತಾಲೂಕಿನಲ್ಲಿ 1,154, ಅಣ್ಣಿಗೇರಿ ತಾಲೂಕಿನಲ್ಲಿ 1,806, ನವಲಗುಂದ 851, ಕುಂದಗೋಳ 631, ಕಲಘಟಗಿ ತಾಲೂಕಿನಲ್ಲಿ 2, 735ಬೋಗಸ್ ಕಾರ್ಡ್ಗಳನ್ನು ಪತ್ತೆ ಹಚ್ಚಿ ರದ್ದು ಪಡಿಸಲಾಗಿದೆ.
ನೋಂದಣಿ, ನವೀಕರಣ ಸಮಯದಲ್ಲಿ ಮಾಹಿತಿ ಪಡೆಯುವ ಜತೆಗೆ ಕೆಲಸದ ಸ್ಥಳವನ್ನು ಪರಿಶೀಲಿಸಲಾಗುತ್ತಿದೆ. ಜಿಪಿಎಸ್ ಆಧಾರಿತ ಮಾಹಿತಿ ಪಡೆಯಲಾಗುತ್ತಿದೆ. ಈ ಮೂಲಕ ಅರ್ಹರಿಗೆ ಸಿಗಬೇಕಾದ ಸೌಲಭ್ಯ ದುರ್ಬಳಕೆಯಾಗದಂತೆ ಎಚ್ಚರ ವಹಿಸಲಾಗಿದೆ. `ಕುಟುಂಬ' ತಂತ್ರಾoಶದ ಮೂಲಕ ಇತರೆ ಯೋಜನೆಗಳಲ್ಲಿ ಸೌಲಭ್ಯ ಪಡೆಯುತ್ತಿರುವ ಕಟ್ಟಡ ಕಾರ್ಮಿಕರಾಗಿ ನೋಂದಾಯಿಸಿಕೊoಡಿರುವವರ ಮಾಹಿತಿಯನ್ನೂ ಪರಿಶೀಲಿಸಲಾಗುತ್ತಿದೆ. ಸಮಸ್ಯೆ ಕಂಡು ಬಂದಲ್ಲಿ ಅದನ್ನು ಪರಿಶೀಲಿಸಿ ಕ್ರಮ ವಹಿಸಲಾಗುತ್ತಿದೆ.
ಈ ಮೊದಲು ಯಾರೂ ಬೇಕಾದರೂ ಕಟ್ಟಡ ಕಾರ್ಮಿಕರ ಕಾರ್ಡ್ಗಳನ್ನು ಅಕ್ರಮವಾಗಿ ಮಾಡಿಸಿಕೊಂಡು, ಬೇಕಾದ ಸೌಲಭ್ಯ ಪಡೆಯಲು ಸುಲಭ ಅವಕಾಶವಿತ್ತು. ಇದಕ್ಕೆ ಕಡಿವಾಣ ಹಾಕಲು ಕಾರ್ಮಿಕ ಇಲಾಖೆ ಬಹಳಷ್ಟು ಕ್ರಮ ವಹಿಸಿದೆ. ಅದರಲ್ಲೂ ಪ್ರಮುಖವಾಗಿ `ಕುಟುಂಬ' ತಂತ್ರಾoಶದ ಮೂಲಕ ಇವರು ಕೃಷಿ, ಮನರೇಗಾ ಸೇರಿ ನಾನಾ ಯೋಜನೆಯಡಿ ನೋಂದಾಯಿಸಿಕೊoಡಿದ್ದಾರೆಯೇ ಎಂದು ಹೋಲಿಸಿ ಪರಿಶೀಲಿಸಲಾಗುತ್ತದೆ. ಒಂದೊಮ್ಮೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಲ್ಲಿ ಅಂತವರ ಬಗ್ಗೆ ಸ್ಥಳ ಪರಿಶೀಲಿಸಿ ಕ್ರಮ ವಹಿಸಲಾಗುತ್ತದೆ. ಬೋಗಸ್ ಕಾರ್ಡ್ ಪಡೆದವರ ಪೈಕಿ ಕೆಲವರು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿರುವುದು ಕಂಡು ಬಂದಿದೆ. ಅಂತವರಿಗೆ ಕೇವಲ ಎಚ್ಚರಿಕೆ ನೀಡಲಾಗಿದೆ. ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರು ಸೇರಿ ಇನ್ನುಳಿದ ಅನರ್ಹ ಕಾರ್ಡ್ ಹೊಂದಿದವರ ಮೇಲೆ ಇಲಾಖೆ ನಿಯಮಾನುಸಾರ ಕ್ರಮ ಜರುಗಿಸಲಾಗಿದೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿoದ ಗುರುತಿನ ಚೀಟಿ ಪಡೆಯಬೇಕು ಎಂದರೆ ವರ್ಷದಲ್ಲಿ 90 ದಿನ ಕಾರ್ಮಿಕರಾಗಿ ಕೆಲಸ ಮಾಡಿರಬೇಕು. ಕಾರ್ಮಿಕರ ಗುರುತಿನ ಚೀಟಿಗಾಗಿ ಬಂದಿರುವ ಅರ್ಜಿ ಪರಿಶೀಲಿಸಿ, ಅಽಕಾರಿಗಳು ಸ್ಥಳ ಪರಿಶೀಲಿಸುತ್ತಾರೆ. ಪ್ರತಿವರ್ಷ ಕಾರ್ಡ್ ನವೀಕರಣ ಮಾಡುವಾಗಲೂ ಅಗತ್ಯ ಮಾನದಂಡಗಳ ಅನುಸಾರ ಕಾರ್ಡ್ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಅನರ್ಹ ಕಟ್ಟಡ ಕಾರ್ಮಿಕರ ಕಾರ್ಡ್ಗಳನ್ನು ರದ್ದು ಮಾಡುವ ಕಾರ್ಯ ನಡೆದಿದೆ.