ಹನುಮಸಾಗರ ಸಮೀಪದ ತುಗ್ಗಲಡೋಣಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೆರೆ ಅಭಿವೃದ್ಧಿ ಸಮಿತಿಯಿಂದ ಅಭಿವೃದ್ಧಿಪಡಿಸಿದ ಕೆರೆಯನ್ನು ಶನಿವಾರ ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು. ಕೊಪ್ಪಳ ವಿಭಾಗದ ನಿರ್ದೇಶಕ ಗಣೇಶ ಬಿ, ಗ್ರಾಪಂ ಅಧ್ಯಕ್ಷೆ ರೇಖಾ ರಾಮನಗೌಡ, ತಾಲೂಕು ಯೋಜನಾಧಿಕಾರಿ ಶೇಖರ್ ನಾಯ್ಕ, ಕೃಷಿ ಮೇಲ್ವಿಚಾರಕ ರವಿಚಂದ್ರ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವರಾಜ್ ಬೆಣ್ಣಿ, ಪಿಡಿಒ ಬಸವರಾಜ ಬಳಗೋಡ ಇತರರಿದ್ದರು. 
ಜಿಲ್ಲೆ

ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ವೃದ್ಧಿ

ಕುರುವತ್ತಿ ಶ್ರೀಕಾಂತಪ್ಪ

ಹನುಮಸಾಗರ: ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುದನ್ನು ತಪ್ಪಿಸಲು ಕೆರೆಗಳ ಹೂಳು ತೆಗೆದು ಅಭಿವೃದ್ಧಿ ಮಾಡುವ ಕಾರ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪಳ ವಿಭಾಗದ ನಿರ್ದೇಶಕ ಗಣೇಶ ಬಿ. ಹೇಳಿದರು.

ಸಮೀಪದ ತುಗ್ಗಲಡೋಣಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಗ್ರಾಪಂ ಕೆರೆ ಅಭಿವೃದ್ಧಿ ಸಮಿತಿಯಿಂದ 13.5 ಲಕ್ಷ ರೂ. ನುದಾನದಲ್ಲಿ ಅಭಿವೃದ್ಧಿಪಡಿಸಿದ ಕೆರೆಯನ್ನು ಶನಿವಾರ ಗ್ರಾಮಸ್ಥರಿಗೆ ಹಸ್ತಾಂತರಿಸಿ ಮಾತನಾಡಿದರು.

4 ರಿಂದ 5 ಎಕ್ಕರೆ ವಿಸ್ತೀರ್ಣದ ಕೆರೆಯನ್ನು ಹೂಳು ತೆಗೆದು ಅಭಿವೃದ್ಧಿ ಮಾಡಲಾಗಿದೆ. ಇದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 10 ಲಕ್ಷ ಸೇರಿ ಒಟ್ಟು 13.5 ಲಕ್ಷ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಪಡಿಸಿದ್ದು, ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ರೈತರಿಗೆ ಅನುಕೂಲವಾಗಲಿದೆ ಎಂದರು.

ಗ್ರಾಪಂ ಅಧ್ಯಕ್ಷೆ ರೇಖಾ ರಾಮನಗೌಡ, ತಾಲೂಕು ಯೋಜನಾಧಿಕಾರಿ ಶೇಖರ್ ನಾಯ್ಕ, ಕೃಷಿ ಮೇಲ್ವಿಚಾರಕ ರವಿಚಂದ್ರ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವರಾಜ್ ಬೆಣ್ಣಿ, ಪಿಡಿಒ ಬಸವರಾಜ ಬಳಗೋಡ, ಗ್ರಾಪಂ ಉಪಾಧ್ಯಕ್ಷೆ ಕವಿತಾ ಹನುಮಪ್ಪ, ಸದಸ್ಯರಾದ ನಾಗರತ್ನ ಮಾರುತಿ ಕ್ವಾಟಿ, ಯಲ್ಲಪ್ಪ ಕುಮಿಂಚಿ, ದಾವಲಸಾಬ್ ಮಂಗ್ಳೂರ, ವಲಯ ಮೇಲ್ವಿಚಾರಕ ನವೀನ್ ಇತರರಿದ್ದರು.