ಜಿಲ್ಲೆ

ಧರ್ಮಸ್ಥಳ ಸಂಸ್ಥೆಯ ಯೋಜನೆ ಜನಪರ

ಸೋಮಲಿಂಗ ತಳವಾರ

ಇಟಗಿ: ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕ ಸದೃಢತೆ ಜತೆಗೆ ಸಾಮಾಜಿಕವಾಗಿ ಸಬಲೀಕರಣ ಹೊಂದುವಲ್ಲಿ ಧರ್ಮಸ್ಥಳ ಸಂಸ್ಥೆ ಕೊಡುಗೆ ಶ್ಲಾನೀಯ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಸಮೀಪದ ದೇವಲತ್ತಿ ಗ್ರಾಮದ ಮಹರ್ಷಿ ಮುಕ್ತಿ ಮಂದಿರ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಈಚೆಗೆ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಧರ್ಮಸ್ಥಳ ಸಂಸ್ಥೆಯ ಜನಪರ ಯೋಜನೆಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬಿಜೆಪಿ ಮುಖಂಡ ಪ್ರಮೋದ ಕೊಚೇರಿ ಮಾತನಾಡಿದರು. ಜೆಡಿಎಸ್​ ಮುಖಂಡ ನಾಸಿರ್​ ಬಾಗವಾನ, ಪಾರಿಶ್ವಾಡ ಹನಿವೆಲ್​ ಇಂಟರ್​ನ್ಯಾಷನಲ್​ ಶಾಲೆ ಅಧ್ಯ ಸುಭಾಷ ಗುಳಶೆಟ್ಟಿ, ಬಿಳಕಿ ರುದ್ರಸ್ವಾಮಿಮಠದ ಚನ್ನಬಸವದೇವರು, ತಾಲೂಕು ಯೋಜನಾಧಿಕಾರಿ ಗಣಪತಿ ನಾಯ್ಕ, ಮಲ್ಲಿಕಾರ್ಜುನ ವಾಲಿ, ಪಂಚಾರಿ ಸ್ವಾಮೀಜಿ, ಗೀತಾ ಕುರಬರ, ಬಸನಗೌಡ ಪಾಟೀಲ, ಶಂಕರಗೌಡ ಪಾಟೀಲ, ಜಯವಂತ ನಿಡಲಕರ, ದೇವೇಂದ್ರ ಗವಿ, ಗಂಗಾಧರ ಕಾಳಚರಂತಿಮಠ ಇತರರಿದ್ದರು.