ಕೋಟ: ಬ್ರಹ್ಮಾವರ ವಲಯದ ಕೋಡಿ ಕನ್ಯಾನ ಸೋಮಬಂಗೇರ ಸ್ಮಾರಕ ಸರ್ಕಾರಿ ಪ್ರೌಢಶಾಲೆ, ವಿದ್ಯಾರ್ಥಿ ಧನ್ವಿ ಜೆ.ಅಮೀನ್ ಬೆಂಗಳೂರಿನಲ್ಲಿ ನಡೆದ 14ರ ವಯೋಮಾನದ ವಿಭಾಗದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸತತ ಎರಡನೇ ಬಾರಿ ಪ್ರಥಮ ಸ್ಥಾನ ಪಡೆದು ಪಂಜಾಬ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅವರು ಕೋಡಿ ಕನ್ಯಾನದ ಕರಾಟೆ ಶಿಕ್ಷಕ ಜಗನ್ನಾಥ್ ಅಮೀನ್ ಅವರ ಪುತ್ರ.