ಜಿಲ್ಲೆ

ನಟನ ರಂಗಶಾಲೆಯಲ್ಲಿ ಫೆ.25 ರಂದು ಢಾಣ ಡಂಗುರ ನಾಟಕ

ಮೈಸೂರು: ರಾಮಕೃಷ್ಣನಗರದ ನಟನ ರಂಗಶಾಲೆಯಲ್ಲಿ ಫೆ.25 ರಂದು ಸಂಜೆ 6.30ಕ್ಕೆ ‘ಢಾಣ ಡಂಗೂರ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ವೈದೇಹಿ ಅವರ ನಾಟಕವನ್ನು ಲಾವಣ್ಯ ಮೈಸೂರು ನಿರ್ದೇಶಿಸಿದ್ದಾರೆ. ನಟನ ರಂಗಶಾಲೆಯ 2023-24ನೇ ಸಾಲಿನ ವಾರಾಂತ್ಯ ರಂಗಶಾಲೆಯ ಮಕ್ಕಳು ನಾಟಕವನ್ನು ಪ್ರದರ್ಶಿಸಲಿದ್ದಾರೆ.

ವೈದೇಹಿ ಅವರು ಬರೆದಿರುವ ಅನೇಕ ಮಕ್ಕಳ ನಾಟಕಗಳಲ್ಲಿ ಢಾಣ ಡಂಗುರವು ಒಂದು. ಈ ಕಥೆಯು ಒಂದು ಹಳ್ಳಿಯಲ್ಲಿ ಜರಗುತ್ತದೆ. ಅರಮನೆಯಲ್ಲಿದ ರಾಜಕುಮಾರನು ಕಾಣೆಯಾಗಿರುತ್ತಾನೆ. ಅವನು ಹೇಗೆ ಇರುತ್ತಾನೆ ಎಂಬ ಅರಿವಿಲ್ಲದೆ ಜನರು ಕಂಗಾಲಾಗಿದ್ದಾರೆ. ಮಡಕೆ ಮನೆಯಲ್ಲಿ ಕೆಲವು ನೊಂದ ಜೀವಿಗಳು ಬಂದು ಕೂಡುತ್ತಿದ್ದಾರೆ.

ಹೇಗಾದರೂ ತಮ್ಮ ದೂರನ್ನು ರಾಜನಿಗೆ ಮುಟ್ಟಿಸಬೇಕೆಂದು ಪರಿತಪಿಸುತ್ತಿದ್ದಾರೆ. ಆದರೆ ರಾಜನು ಊಟ ತಿಂಡಿ ಬಿಟ್ಟು ಮಗನಿಗಾಗಿ ಕಾಯುತ್ತಾ ಕುಳಿತಿರುತ್ತಾನೆ. ತನ್ನ ಮಗನನ್ನು ಹುಡುಕಿಕೊಟ್ಟವರಿಗೆ ಅರ್ಧರಾಜ್ಯ ಕೊಡುತ್ತೇನೆ ಎಂದು ಡಂಗೂರ ಹೊಡೆಸುತ್ತಾನೆ. ಹೀಗೇ ಸಾಗುವ ಕಥೆಯಲ್ಲಿ ರಾಜಕುಮಾರನು ಸಿಗುತ್ತಾನಾ, ಅರ್ಧರಾಜ್ಯ ಯಾರ ಪಾಲಾಗುತ್ತದೆ ಎಂದೆಲ್ಲಾ ತಿಳಿಯಲು, ಮಕ್ಕಳ ಮನಸ್ಸಿಗೆ ಮುದ ನೀಡುವ ಈ ನಾಟಕವು ಅವರ ಕಲ್ಪನಾ ಶಕ್ತಿಯನ್ನು ಒರೆಗೆ ಹಚ್ಚುವುದರಲ್ಲಿ ಎರಡು ಮಾತಿಲ್ಲ.