ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳೊಂದಿಗೆ ಪ್ರಭಾರಿ ಮುಖ್ಯಶಿಕ ಜಿಲಾನಿ ಹುಸೇನಸಾಹೇಬ ಢಾಲಾಯತ್​. 
ಜಿಲ್ಲೆ

ಬಡ ವಿದ್ಯಾರ್ಥಿಗಳ ಭಾಗ್ಯವಿದಾತ ಮುಖ್ಯಶಿಕ್ಷಕ ಢಾಲಾಯತ್​

ಜಮಖಂಡಿ: ಮಕ್ಕಳ ಮನಸ್ಸು ಕೋಮಲವಾದದ್ದು. ಅವರ ಮನಸ್ಸು ಅರ್ಥಮಾಡಿಕೊಂಡು ಬೋಧಿಸುವ ಶಿಕ್ಷಕರು ಅಗತ್ಯವಾಗಿದೆ. ಎಲ್ಲ ತುಂಟಾಟ ಸಹಿಸಿಕೊಂಡು ಮಕ್ಕಳನ್ನು ತಿದ್ದಿ ತೀಡುವ ಪ್ರಾಥಮಿಕ ಶಾಲೆ ಶಿಕರೇ ಮಕ್ಕಳಿಗೆ ನಿಜವಾದ ಹೀರೊಗಳು.

ಇಂತ ಅಪರೂಪದ ಶಿಕರಲ್ಲಿ ತಾಲೂಕಿನ ಹುನ್ನೂರ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಪ್ರಭಾರಿ ಮುಖ್ಯಶಿಕ್ಷಕ ಜಿಲಾನಿ ಹುಸೇನಸಾಹೇಬ ಢಾಲಾಯತ್​ ಒಬ್ಬರು.

ಶಾಲೆಯಲ್ಲಿ ಒಂದರಿಂದ 7ನೇ ತರಗತಿವರೆಗೆ ಅಂದಾಜು 32 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಜತೆಗೆ ಸಾಧಕರ ಜನರಲ್​ ನಾಲೆಡ್ಜ್​ ಸೇರಿ ಹಲವಾರು ಪುಸ್ತಕಗಳನ್ನು ಓದಲು ನೀಡುತ್ತಿದ್ದಾರೆ ಈ ಗುರುಗಳು.

ಶಾಲೆಗೆ ಆಗಮಿಸುವ ಬಡವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ಹರಿದಿದ್ದರೆ, ಶಾಲಾ ಪೀಸ್​, ಸ್ಕಾಲರ್​ಶೀಪ್​ ಾಮ್​ರ್ಗಳನ್ನು ತಾವೇ ಸ್ವತ@ ಖರ್ಚಿನಲ್ಲಿ ತಂದು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸ್ಕಾಲರ್​ಶ್​ೀಗಾಗಿ ಬ್ಯಾಂಕ್​ ಖಾತೆ ಇರದಿದ್ದರೆ ತಾವೇ ಅಕೌಂಟ್​ ತೆರೆಯಲು ಹಣ ಸಹಾಯ ನೀಡಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಎಲೆ ಮರೆಕಾಯಿಯಂತೆ ಕಾರ್ಯ ಮಾಡುತ್ತಿರುವ ಢಾಲಾಯತ್​ ಶಿಕರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತಿದ್ದಾರೆ.

ಶಾಲೆಯಲ್ಲಿ ತಯಾರಿಸುವ ಬಿಸಿಯೂಟವನ್ನು ಶಾಲಾ ಮಕ್ಕಳ ಜತೆಗೆ ನೆಲದ ಮೇಲೆ ಕುಳಿತು ಮಧ್ಯಾಹ್ನದ ಬಿಸಿಯೂಟ ಮಾಡುವುದು ಮಕ್ಕಳ ಮೇಲಿನ ಪ್ರೀತಿಗೆ ನಿದರ್ಶನವಾಗಿದೆ. ಕೇವಲ ತಮ್ಮ ಶಾಲೆ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡದೆ ತಮ್ಮ ನಿವಾಸದ ಗಲ್ಲಿ, ಬೇರೆ ಶಾಲೆಯ ಬಡ ವಿದ್ಯಾರ್ಥಿಗಳಿಗೂ ಸಹಾಯ ಮಾಡುತ್ತಿರುವುದು ವಿಶೇಷ.

ಶಾಲೆಯ ವಿದ್ಯಾರ್ಥಿಯೊಬ್ಬನ ಕಣ್ಣಿನ ನೋವಿಗೆ ಕಣ್ಣೆ ಕಳೆದುಕೊಳ್ಳುವಂತ ಸ್ಥಿತಿಗೆ ತಲುಪಿದ್ದ ಆ ವಿದ್ಯಾರ್ಥಿಗೆ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವಂತೆ ಮಾಡಿ ಆ ವಿದ್ಯಾರ್ಥಿಯ ಕಣ್ಣು ಉಳಿಸಿರುವ ಕಾರ್ಯ ಮಾಡಿದ್ದು ಪಾಲಕರ ಪಾಲಿಗೆ ವರವಾಗಿದ್ದಾರೆ.