ಜಿಲ್ಲೆ

ಮಂಗಳೂರು ತಲುಪಿದ ಎನ್‌ಸಿಸಿ ಬಾಲಕಿಯರ ಮೆಗಾ ಸೈಕಲ್ ರ‌್ಯಾಲಿ

ಮಂಗಳೂರು: ಡಿಜಿ ಎನ್‌ಸಿಸಿ ವತಿಯಿಂದ ಅಜಾದಿ ಕಾ ಅಮೃತ ಮಹೋತ್ಸವ ಮತ್ತು ನಾರಿ ಶಕ್ತಿಗಾಗಿ ಅಖಿಲ ಭಾರತ ಮೆಗಾ ಸೈಕಲ್ ರ‌್ಯಾಲಿ ಹಮ್ಮಿಕೊಂಡಿದ್ದು ಶನಿವಾರ ಮಂಗಳೂರು ತಲುಪಿದೆ.


ಡಿ.8ರಂದು ಕನ್ಯಾಕುಮಾರಿಯಿಂದ ಆರಂಭಗೊಂಡ ರ‌್ಯಾಲಿ 2024ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ನವದೆಹಲಿಯಲ್ಲಿ ಮುಕ್ತಾಯಗೊಳ್ಳಲಿದೆ. ಡಿ.17ರಂದು ಬೆಳಗ್ಗೆ 6 ಗಂಟೆಗೆ ಕೆಪಿಟಿ ಯುದ್ಧ ಸ್ಮಾರಕದಿಂದ ಹೊರಟು ಉಡುಪಿ ಮತ್ತು ಹೊನ್ನಾವರ ಕಡೆಗೆ ಮೆಗಾ ಸೈಕಲ್ ರ‌್ಯಾಲಿ ತೆರಳಲಿದೆ.
ರ‌್ಯಾಲಿಯನ್ನು ಬ್ರಿಗೇಡಿಯರ್ ನರೇಂದ್ರ ಚಿರಾಗ್, ಗ್ರೂಪ್ ಕಮಾಂಡರ್ ಎನ್‌ಸಿಸಿ ವಡೋದರಾ ಮತ್ತು ಕರ್ನಲ್ ವಿ.ಎಂ.ಸಿಂಗ್ ಮುನ್ನಡೆಸುತ್ತಿದ್ದಾರೆ.
ಒಬ್ಬರು ಕಿರಿಯ ಆಯೋಗದ ಅಧಿಕಾರಿ, ನಿಯೋಜಿಸಿದ ಇಬ್ಬರು ಅಧಿಕಾರಿಗಳು, ಐವರು ನಾಗರಿಕ ಸಿಬ್ಬಂದಿ, 15 ಮಂದಿ ಎನ್‌ಸಿಸಿ ಗರ್ಲ್ಸ್ ಕೆಡೆಟ್‌ಗಳು ರ‌್ಯಾಲಿಯಲ್ಲಿದ್ದಾರೆ.