ಕಾರವಾರ: ಬಡವರ, ಅಸಹಾಯಕರ ಸೇವೆಯೇ ಜೀವನದ ಗುರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಗರದ ಕಾಜುಬಾಗ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ದಿ.ಡಿ ದೇವರಾಜ ಅರಸು ಅವರ 108 ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನೊಬ್ಬರ ಸೇವೆ ಮಾಡುವುದೇ ಜೀವನದ ದೊಡ್ಡ ಗುರಿ ಆಗಬೇಕು. ಆಗ ಜನರ ಮನಸ್ಸಿನಲ್ಲಿ ರಾಜಕಾರಣಿಗಳಾಗಲಿ ಅಥವಾ ಅಽಕಾರಿಗಳಾಗಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ಹಿಂದುಳಿದ ವರ್ಗದವರಿಗೆ ಓದಲು ಸಹಾಯ ಸಹಕಾರ ಸಿಗಲು ದೇವರಾಜ ಅರಸು ಅವರು ಕಾರಣ. ಊಳುವವನೇ ಹೊಲದೊಡೆಯ ಕಾಯ್ದೆ ಜಾರಿಗೆ ತಂದವರು ದೇವರಾಜ ಅರಸು ಅವರು. ಬಡವರ ಪರ ಇಂಥ ಹಲವು ಯೋಜನೆಗಳಿಂದ ಅವರು ಇಂದೂ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.
ಅರಸು ಅವರ ನಂತರ ಈಗಿನ ಸಿಎಂ ಸಿದ್ದರಾಮಯ್ಯ ಅವರೂ ಬಡವರ ಪರ ಅಪಾರ ಕಾಳಜಿ ಹೊಂದಿದ್ದಾರೆ. ಅದೇ ರೀತಿ ಕನಸು ಇಟ್ಟುಕೊಂಡಿದ್ದಾರೆ. ಇದು ಬಡವರ ಸರ್ಕಾರ ಎಂದರು.
ಅಧ್ಯಕ್ಷತೆ ವಹಿಸಿದ್ದ ಸತೀಶ ಸೈಲ್ ಮಾತನಾಡಿ, ಅರಸು ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್, ಅರಸು ಧ್ವನಿ ಇಲ್ಲದವರಿಗೆ ಧ್ವನಿಯಾದವರು ಎಂದರು.
ಪಿಜಿ ವಿದ್ಯಾರ್ಥಿ ಸೋಮಲಿಂಗ ಬಿ.ಬಾಳಿಕಾಯಿ ಉಪನ್ಯಾದ ನೀಡಿದರು. ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಎಎಸ್‌ಪಿ ಸಿ.ಟಿ.ಜಯಕುಮಾರ್, ತಹಸೀಲ್ದಾರ್ ನಿಶ್ಚಲ ನರೋನಾ, ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಜಿ.ಡಿ.ಮನೋಜೆ, Àಲಿತ ಸಂಘಟನೆಗಳ ಮುಖಂಡರಾದ ದೀಪಕ ಕುಡಾಳಕರ್, ಎಲಿಷಾ ಎಲಕಪಾಟಿ, ನಗರಸಭೆ ಸದಸ್ಯ ಹನುಮಂತ ತಳವಾರ, ಮೀನುಗಾರರ ಮುಖಂಡ ಬಾಬು ಜಿ.ಅಂಬಿಗ ವೇದಿಕೆಯಲ್ಲಿದ್ದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಽಕಾರಿ ಜಿ. ಸತೀಶ ಸ್ವಾಗತಿಸಿದರು. ಶ್ರೀಶೈಲ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಅಂಬೇಡ್ಕರ್ ವೃತ್ತದಿಂದ ಅರಸು ಅವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಕಲಾ ತಂಡಗಳು ಗಮನ ಸೆಳೆದವು.