ಜಿಲ್ಲೆ

ಭಕ್ತಿಗೀತೆಗಳ ಗಾಯನದೊಂದಿಗೆ ವಿದಾಯ

ದೇವದುರ್ಗ: ಜಾಲಹಳ್ಳಿ ಪಟ್ಟಣದಲ್ಲಿ ಪರಿಸರ ಸ್ನೇಹಿ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಬುಧವಾರ ವಿಸರ್ಜನೆ ಮಾಡಲಾಯಿತು.

ಜೋಡೆತ್ತಿನ ಬಂಡಿಯನ್ನು ತಳಿರು-ತೋರಣಗಳಿಂದ ಶೃಂಗಾರ ಮಾಡಿ, ಬಣ್ಣರಹಿತ ಕೇವಲ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಯನ್ನು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸನಾದಿ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. ಪರಿಸರಕ್ಕೆ ಹಾನಿಯಾಗುವ ಪಟಾಕಿ, ಕರ್ಕಶ ಶಬ್ದ, ವಾಹನ ರಹಿತವಾಗಿ, ಭಕ್ತಿಗೀತೆಗಳ ಗಾಯನದೊಂದಿಗೆ ಗಣೇಶನ ವಿಸರ್ಜನೆ ಮಾಡಲಾಯಿತು.