ಜಿಲ್ಲೆ

ಯಲವಟ್ಟಿಯಲ್ಲಿ ಭಕ್ತಿ ಸಮರ್ಪಣೆ ಸಮಾರಂಭ 14ಕ್ಕೆ

Davangere - Desk - Basavaraja P

ಎಕ್ಕೆಗೊಂದಿ ಕ್ರಾಸ್‌ನಲ್ಲಿ ಸಿರಿಗೆರೆ ಸ್ವಾಮೀಜಿ ಸ್ವಾಗತ I ಕಾರ್ಯದರ್ಶಿ ಇಟ್ಟಿಗೆ ಶಿವಣ್ಣ ಮಾಹಿತಿ

ಮಲೇಬೆನ್ನೂರು: ತರಳಬಾಳು ಜಗದ್ಗುರು ಲಿಂ. ಶಿವಕುಮಾರ ಶಿವಾಚಾರ್ಯ ಶ್ರೀ ಅವರ 32ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಹರಿಹರ ತಾಲೂಕಿನ ಯಲವಟ್ಟಿಯಲ್ಲಿ ಸೆ. 14ರ ಶನಿವಾರ ಭಕ್ತಿ ಸಮರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಹರಿಹರ ತಾಲೂಕು ಸಾಧು ಲಿಂಗಾಯತ ಸಮಾಜದ ಕಾರ್ಯದರ್ಶಿ ಇಟ್ಟಿಗೆ ಶಿವಣ್ಣ ತಿಳಿಸಿದರು.

ಅಂದು ಬೆಳಗ್ಗೆ 11.30ಕ್ಕೆ ಆಯೋಜಿಸಿರುವ ಭಕ್ತಿ ಸಮರ್ಪಣೆ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಯಲವಟ್ಟಿಯ ಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹರಿಹರ ತಾಲೂಕು ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಅಮರಾವತಿ ಮಹದೇವಪ್ಪ ಗೌಡ್ರು ಅಧ್ಯಕ್ಷತೆ ವಹಿಸುವರು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಿ.ಪಿ. ಹರೀಶ್, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತಿತರರು ಪಾಲ್ಗೊಳ್ಳುವರು ಎಂದರು.

ಹರಿಹರ ತಾಲೂಕಿನಲ್ಲಿ ಇದು 10ನೇ ವರ್ಷದ ಭಕ್ತಿ ಸಮರ್ಪಣೆ ಕಾರ್ಯಕ್ರಮ ಆಗಿದ್ದು, ಎಲ್ಲ ಸಮಾಜದವರನ್ನೂ ಒಟ್ಟುಗೂಡಿಸಿಕೊಂಡು ಕಾರ್ಯಕ್ರಮ ಮಾಡಲಾಗುತ್ತಿದೆ. 2500 ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ತಿಳಿಸಿದರು.

ಅಂದು ಬೆಳಗ್ಗೆ 10.30ಕ್ಕೆ ಎಕ್ಕೆಗೊಂದಿ ಕ್ರಾಸ್‌ನಲ್ಲಿ ಸಿರಿಗೆರೆ ಸ್ವಾಮೀಜಿಯನ್ನು ಸ್ವಾಗತಿಸಿ, ಅಲ್ಲಿಂದ ಯಲವಟ್ಟಿವರೆಗೆ ಬೈಕ್ ರಾಲಿ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷ ಅಮರಾವತಿ ಮಹದೇವಪ್ಪಗೌಡ್ರು, ಯಲವಟ್ಟಿ ಚನ್ನಬಸಪ್ಪ, ಡಿ.ಎಚ್. ಮಹೇಂದ್ರಪ್ಪ, ಕೆ. ಚನ್ನಬಸಪ್ಪ, ಬಿ. ಸಿದ್ದೇಶ್, ಡಿ.ಜಿ,. ರಾಜೇಶ್‌ಗೌಡ್ರು, ಅನಿಲ್‌ಕುಮಾರ್, ಕೀರ್ತಿಕುಮಾರ್, ಜಿ. ಮಂಜುನಾಥ್ ಪಟೇಲ್ ಇತರರಿದ್ದರು.