ಹುಬ್ಬಳ್ಳಿ: ಇಲ್ಲಿಯ ದೇಸಾಯಿ ಓಣಿಯ ಶ್ರೀ ಬಸವಣ್ಣ ದೇವರ ದೇವಸ್ಥಾನ ಜೀರ್ಣೋದ್ಧಾರ ನಿಮಿತ್ತ ದೇವಸ್ಥಾನದಲ್ಲಿ ಶುಕ್ರವಾರ ಪುರಾಣ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ನಂದಿ ಎದುರು ಬಸವಣ್ಣ ಇರುವುದು ಸಾಮಾನ್ಯ. ಆದರೆ, ಈ ದೇವಸ್ಥಾನದಲ್ಲಿ ಬಸವಣ್ಣನ ಪಕ್ಕದಲ್ಲಿ ಈಶ್ವರ ಇರುವುದು ಹೊಸ ಅನುಭವವಾಗಿದೆ. ಜನರ ಭಕ್ತಿ ಪರಾಮರ್ಶೆಗೆ ಯಾವ ರೀತಿ ವಿಮರ್ಶೆ ಮಾಡಬೇಕೆಂಬುದು ತಿಳಿಯದಾಗಿದೆ ಎಂದರು.
ಡಾ.ಆರ್.ಸಿ. ವಾಲಿ ಮಹಾರಾಜ ಮಾತನಾಡಿ, ದೇವರ ಮೇಲಿನ ಭಕ್ತಿಗೆ ಜನರ ಅಪಾರ ನಂಬಿಕೆ ಇರಬೇಕು. ತಂದೆ-ತಾಯಿಯನ್ನು ದೇವರೆಂದು ಪೂಜಿಸಬೇಕು ಎಂದರು.
ವಿಜಯಪುರದ ಶ್ರೀ ಸಿದ್ದಲಿಂಗ ದೇವರು ಪ್ರವಚನ ನೀಡಿದರು.
ಪ್ರಕಾಶ ಬೆಂಡಿಗೇರಿ ಸ್ವಾಗತಿಸಿ ನಿರೂಪಿಸಿದರು.
ಹಿರಿಯರಾದ ಸಂಗಪ್ಪ ಮಟ್ಟಿ, ಬಸವರಾಜ ಚನ್ನೋಜಿ, ನಾಗಪ್ಪ ನಳವಡಿ, ಮಲ್ಲಿಕಾರ್ಜುನ ಬೀಳಗಿ, ಮಂಜುನಾಥ ನಾಯ್ಕರ್, ಈರಣ್ಣ ಇಂಗಳಹಳ್ಳಿ ಮಠ, ಗುರುಸಿದ್ದಪ್ಪ ಸಂಶಿ ಇತರರು ಇದ್ದರು.