ಸುಡುವ ಹುಗ್ಗಿಯಲ್ಲಿ ಕೈ ಹಾಕಿರುವ ಭಕ್ತ. 
ಜಿಲ್ಲೆ

ಬಿಸಿ ಹುಗ್ಗಿಯಲ್ಲಿ ಕೈಹಾಕಿದ ಭಕ್ತರು

ವಿನಯ ಆಶೋಕ ನಾಯ್ಕ

ಕಲಾದಗಿ: ಕುದಿಯುವ ಹುಗ್ಗಿಯಲ್ಲಿ ಬರಿಗೈಯಲ್ಲಿ ಹುಗ್ಗಿ ತೆಗೆಯುವುದೆಂದರೇ ಸಾಮಾನ್ಯವೇ. ಪಲ್ಲಕ್ಕಿ ಹೊತ್ತ ಪೂಜಾರಿ, ಜಾತ್ರೆಗೆ ಆಗಮಿಸಿದ ಭಕ್ತರು ಯಾವುದೇ ಅಳುಕಿಲ್ಲದೇ ಇಂತಹದೊಂದು ಸಾಹಸ ಮಾಡುತ್ತಾರೆ. ನೋಡುಗರನ್ನು ವಿಸ್ಮಯಗೊಳಿಸುವ ಈ ಪ್ರಕ್ರಿಯೆ ಕಂಡು ಬಂದಿದ್ದು ಗೋವಿಂದಕೊಪ್ಪದಲ್ಲಿ ಶುಕ್ರವಾರ ಜರುಗಿದ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ.

ಕುದಿಯುವ ಹುಗ್ಗಿಯ ಬೃಹತ್ ಪಾತ್ರೆಯಲ್ಲಿ ಕೈಹಾಕಿ ನೈವೇದ್ಯಕ್ಕೆಂದು ಹುಗ್ಗಿಯನ್ನು ಐದು ಬಾರಿ ತೆಗೆದರೂ ಕೈ ಸುಡದಿರುವುದು ಅಚ್ಚರಿಗೆ ಕಾರಣವಾಗುವ ಜತೆಗೆ ದೈವದ ಮೇಲಿನ ನಂಬಿಕೆಗೆ ಈ ಜಾತ್ರೆ ಸಾಕ್ಷಿಯಾಗುತ್ತದೆ.

ಗ್ರಾಮದಲ್ಲಿ ಡೊಳ್ಳಿನ ವಾಲಗದೊಂದಿಗೆ ಶಿವಾಪುರ, ಮಂಟೂರು, ಅನವಾಲ, ಸೊಪಡ್ಲಾ, ಬೂದಿಹಾಳ ಮುಂತಾದ ಊರುಗಳಿಂದ ಬಂದಿದ್ದ ಇಪ್ಪತ್ತಕ್ಕೂ ಅಧಿಕ ಪಲ್ಲಕ್ಕಿಗಳ ಮಹೋತ್ಸವವು ಸಂಭ್ರಮದಿಂದ ನೆರವೇರಿತು.