ಉಮರಜ ಗ್ರಾಮದಲ್ಲಿ ಭಕ್ತರು ದೀಡ ನಮಸ್ಕಾರ ಹಾಕುವ ಮೂಲಕ ರೇವಣಸಿದ್ಧೇಶ್ವರರಿಗೆ ಹರಕೆ ಸಲ್ಲಿಸಿದರು. 
ಜಿಲ್ಲೆ

ಹರಕೆ ಸಲ್ಲಿಸಿದ ಭಕ್ತರು

Vijayapura - Desk - Parashuram Keri

ರೇವತಗಾಂವ: ಸಮೀಪದ ಉಮರಜದ ರೇವಣಸಿದ್ಧೇಶ್ವರ ಜಾತ್ರೆಯಲ್ಲಿ ಭಕ್ತರು ದೀಡ ನಮಸ್ಕಾರ ಹಾಕಿ ಹರಕೆ ಸಲ್ಲಿಸಿದರು.

ಶುಕ್ರವಾರ ನಸುಕಿನ ಜಾವ 4 ಗಂಟೆಯಿಂದ ಸಾಮೂಹಿಕವಾಗಿ ಭೀಮೆಯಲ್ಲಿ ಮಿಂದ ಭಕ್ತರು ರೇವಣಸಿದ್ಧೇಶ್ವರ ದೇವಸ್ಥಾನದವರಗೆ ದೀಡ ನಮಸ್ಕಾರ ಹಾಕಿದರು. ಭಾವೈಕ್ಯತೆ ಸಾರುವ ಎಲ್ಲ ಧರ್ಮದ ಕಿರಿಯರಿಂದ ಹಿರಿಯ ಎಲ್ಲ ವಯೋಮಾನದವರು ದೀಡ ನಮಸ್ಕಾರ ಹಾಕಿ ದೇವರದರ್ಶನ ಪಡೆದರು.
ನಸುಕಿನ ಜಾವ 6ಗಂಟೆಗೆ ರೇವಣಸಿದ್ಧೇಶ್ವರ ದೇವಸ್ಥಾನಕ್ಕೆ ಮಹಾಮಜ್ಜನ ಹಾಗೂ 7ಗಂಟೆಗೆ ನೂರಂದಯ್ಯ ಹಿರೇಮಠ ಅವರಿಂದ ಮಹಾರುದ್ರಾಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿತು. ಬೆಳಗ್ಗೆ 10 ಗಂಟೆಗೆ ವಿಶೇಷ ಆಹ್ವಾನಿತರ ಸಮ್ಮುಖದಲ್ಲಿ ಘೋಳೇಶ್ವರ ಮಹಾರಾಜರ ವಿರಚಿತ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.