ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಯುಗಾದಿ ಹಬ್ಬದ ಸಂದರ್ಭ ಶ್ರೀಶೈಲಕ್ಕೆ ಜಿ¯್ಲೆಯ ಮೂಲಕ ಲಕ್ಷಾಂತರ ಯಾತ್ರಿಗಳು ಭೇಟಿ ನೀಡಿದ್ದು ಆರ್ಥಿಕವಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿಗೆ ಭರ್ಜರಿ ಆದಾಯ ತಂದುಕೊಟ್ಟಿದೆ. ವಾರದಮಟ್ಟಿಗೆ ಶ್ರೀಶೈಲಕ್ಕೆ ಓಡಿಸಿದ ವಿಶೇಷ ಬಸ್‌ಗಳು ಬರೋಬ್ಬರಿ ೩.೯೨ ಕೋಟಿ ರೂಪಾಯಿ ಹಣ ತಂದಿದೆ.
ಯುಗಾದಿ ಹಿನ್ನೆಲೆ ರಾಜ್ಯದ ನಾನಾ ಭಾಗಗಳಿಂದ ಶ್ರೀಶೈಲಕ್ಕೆ ಭಾರೀ ಪ್ರಮಾಣದ ಭಕ್ತರು ಭೇಟಿ ನೀಡಿದ್ದರು. ಭಕ್ತರನ್ನು ಕರೆದೊಯ್ಯಲು ವಿಶೇಷ ಬಸï ಓಡಿಸಿತ್ತು. ಅಂತೆಯೇ ಆರ್ಥಿಕವಾಗಿ ವಿವಿಧ ಕಾರಣಗಳಿಗೆ ಸಂಕಷ್ಟದಲ್ಲಿದ್ದ ಸಂಸ್ಥೆಗೆ ಹಣದ ಹೊಳೆ ಹರಿಸಿದೆ.
ಕೇವಲ ಹತ್ತು ದಿನಗಳಲ್ಲಿ ೩.೯೨ ಕೋಟಿ ರೂ. ಆದಾಯ
ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜÁರಿಯಾದ ನಂತರ ಅಭಿವೃದ್ಧಿ ಯೋಜನೆಗೆ ಸರ್ಕಾರದ ಬಳಿ ದುಡ್ಡಿಲ ಎನ್ನುವ ಜತೆಗೆ ಮೊದಲೇ ನಷ್ಟದಲ್ಲಿ ಸಾಗುತ್ತಿದ್ದ ಕೆಕೆಆರ್‌ಟಿಸಿ ಸಂರ್ಪೂಣ ದಿವಾಳಿಯಾಗುತ್ತದೆ ಎನ್ನುವ ಆರೋಪವು ಕೇಳಿ ಬಂದಿತ್ತು. ಮೊದಲೇ ಸಾಲದ ಸುಳಿಗೆ ಸುಲಿಗೆ ಸಿಲುಕಿದ್ದ ಕೆಲ ನಿಗಮಗಳು ಶಕ್ತಿ ಯೋಜನೆಯಿಂದ ಪೂರ್ಣವಾಗಿ ನಷ್ಟದಲ್ಲಿ ನಡೆಯುತ್ತೆವೆ ಎನ್ನಲಾಗಿತ್ತು.
ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜÁರಿಗೊಳಿಸಿದ್ದರಿಂದ ಸಹಜವಾಗೇ ಬಿಎಂಟಿಸಿಯಿAದ ಹಿಡಿದು ಕೆಕೆಆರ್‌ಟಿಸಿಯವರೆಗೂ ಸಾರಿಗೆ ನಿಗಮಗಳ ಆದಾಯಕ್ಕೆ ಕತ್ತರಿ ಬಿದ್ದಿತ್ತು. ಆದರೆ ಯುಗಾದಿ ಹಬ್ಬದ ನಿಮಿತ್ತ ಆಂಧ್ರದ ಶ್ರೀಶೈಲಂನಲ್ಲಿ ಮಲ್ಲಿಕಾರ್ಜುನ ಜÁತ್ರೆ ಅಂಗವಾಗಿ ರಾಯಚೂರು ವಿಭಾಗದಿಂದ ೧೦ ದಿನಗಳ ಮಟ್ಟಿಗೆ ಜಿಲ್ಲೆಯ ೭ ಘಟಕಗಳಿಂದ ಒಟ್ಟು ೨೮೦ ಬಸ್‌ಗಳನ್ನು ಬಿಡಲಾಗಿತ್ತು. ನಿತ್ಯವೂ ನೂರಾರು ಜನ ಪ್ರಯಾಣಿಕರು ಜಿಲ್ಲೆಯ ಸಾರಿಗೆ ಬಸ್‌ಗಳ ಮೂಲಕ ಪ್ರಯಾಣ ಮಾಡಿದ್ದರಿಂದ ಈ ಪೈಕಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗೀಯ ಕಚೇರಿಗೆ ಮಾ.೨೧ ರಿಂದ ೩೧ರ ವರೆಗೆ ಕೇವಲ ೧೦ ದಿನದಲ್ಲಿ ೩.೯೨ ಕೋಟಿ ರೂ.ಭರ್ಜರಿ ಆದಾಯ ಗಳಿಸಿದೆ.
ಶಕ್ತಿ ಯೋಜನೆ ನಡುವೆ ಹೆಚ್ಚಿದ ಆದಾಯ
ಅಂಧ್ರ ಪ್ರದೇಶದ ಶ್ರೀಶೈಲಂನಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪ್ರಸಿದ್ಧ ಜೋರ್ತಿಲಿಂಗಗಳಲ್ಲಿ ಒಂದು. ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದ ಅನೇಕ ಜನರ ಆರಾಧ್ಯ ದೈವವಾಗಿದೆ. ಹೀಗಾಗಿ ಪ್ರತಿ ವರ್ಷ ಯುಗಾದಿ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಜನ ಭಕ್ತರು ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ತೆರಳುತ್ತಾರೆ.
ಕಳೆದ ವರ್ಷವೂ ಲಕ್ಷಾಂತರ ಜನ ಸಾರಿಗೆ ಬಸ್ ಮೂಲಕ ತೆರಳಿ ದರ್ಶನ ಪಡೆದಿದ್ದರು. ಕಳೆದ ವರ್ಷವೂ ಕೆಕೆಆರ್‌ಟಿಸಿ ರಾಯಚೂರು ಘಟಕವು ಸುಮಾರು ೨ ಕೋಟಿಗೂ ಹೆಚ್ಚು ಆದಾಯಗಳಿಸಿತ್ತು. ಈ ಭಾರಿ ಶಕ್ತಿ ಯೋಜನೆಯ ನಡುವೆಯೂ ಭಾರಿ ಆದಾಯ ಗಳಿಸಿರೋದು ಸಂಸ್ಥೆಯ ಆರ್ಥಿಕ ಚಟುವಟಿಕೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆಂದು ಇಲಾಖೆ ಸಿಬ್ಬಂದಿಗಳ ಮಾತಾಗಿದೆ.
ಈ ಬಾರಿ ಬಿಸಿಲು ಹೆಚ್ಚಳವಾಗಿರುವುದರಿಂದ ಪಾದಯಾತ್ರೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಸಾರಿ ಬಸ್ ಮೂಲಕ ಶ್ರೀಶೈಲಂಗೆ ತೆರಳಿದ್ದಾರೆ.ಇದರಿಂದ ಇಲಾಖೆಯ ಆದಾಯಯು ಹೆಚ್ಚಳವಾಗಿದೆ.ಕೇವಲ ೧೦ ದಿನದಲ್ಲಿ ೨೮೦ ಬಸ್‌ಗಳ ಪೈಕಿ ಒಟ್ಟು ೩.೯೨ ಕೋಟಿ ರೂ. ಆದಾಯ ಬಂದಿರುವುದು ಖುಷಿ ತಂದಿದೆ.
ಎA.ಚAದ್ರಶೇಖರ ವಿಭಾಗೀಯ ನಿಯಂತ್ರಣ ಅಽಕಾರಿ ಕೆಕೆಆರ್‌ಟಿಸಿ ರಾಯಚೂರು