ಶ್ರಾವಣ ನಡುವಿನ ಸೋಮವಾರ ಅಪ್ಪನ ಗುಡಿಯಲ್ಲಿ ಜಾತ್ರೆ ಸಂಭ್ರಮ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಭಕ್ತಿಯ ಮಾಸ ಎಂದು ಕರೆಸಿಕೊಳ್ಳುವ ಪವಿತ್ರ ಶ್ರಾವಣದ ನಡುವಿನ ಸೋಮವಾರದಂದು ನಾಡಿನ ಆರಾಧ್ಯ ದೈವವಾಗಿರುವ ಕಲಬುರಗಿಯ ಮಹಾದಾಸೋಹಿ ಶರಣಬಸವೇಶ್ವರ ದೇವಾಲಯದಲ್ಲಿ ಜಾತ್ರೆಯ ಸಂಭ್ರಮ ಮೇಳೈಸಿದಂತಿತ್ತು. ಭಕ್ತರ ಭಾವಪರವಶತೆ ಹೆಚ್ಚಿತ್ತು. ತುಂತುರು ಮಳೆಯ ನಡುವೆಯು ಅಪಾರ ಸಂಖ್ಯೆಯಲ್ಲಿ ಭಕ್ತರು ನೆನೆದುಕೊಂಡೇ ಶರಣರ ಸನ್ನಿಧಿಗೆ ಆಗಮಿಸಿ ದರುಶನ ಪಡೆದುಕೊಂಡು ಧನ್ಯರಾದರು.
ಶ್ರಾವಣ ಮಾಸದ ನಡುವಿನ ಅಥವಾ ಮೂರನೇ ಸೋಮವಾರಕ್ಕೆ ವಿಶೇಷತೆ ಇರುವುದರಿಂದ ಈ ದಿನ ಶರಣರ ದರ್ಶನ ಪಡೆದುಕೊಂಡರೆ ಪರಮಶ್ರೇಷ್ಠತೆ ದರುಶನವಾಗಿ ಶರಣ ಕೃಪೆಯಾಗುತ್ತದೆ. ಬೇಡಿದ್ದನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಸಂಸ್ಠಾನದ ಪರಿಸರದಲ್ಲಿ ಭಕ್ತರ ಸಾಗರ ಕಂಡು ಬಂದಿತು. ದೇವಸ್ಥಾನಕ್ಕೆ ಹೋಗುವ ದಾರಿಗಳ ಇಕ್ಕೆಲದಲ್ಲಿ, ಅಪ್ಪನ ಗುಡಿ ಮುಂಭಾಗ, ಆವರಣದಲ್ಲಿ ಭಕ್ತರು ತಮ್ಮ ಶಕ್ತಿಯಂತೆ ಅನ್ನ ಸಂತರ್ಪಣೆ ಮಾಡಿದರು. ದಾಸೋಹ ಮನೆಯಲ್ಲಿ ಭಕ್ತರು ಪ್ರಸಾದ ಸ್ವೀಕರಿದರು.
ನಸುಕಿನ ಜಾವದಿಂದಲೇ ಮಳೆ ಹನಿಯಲು ಶುರುವಾಯಿತು. ನಸುಕಿನ ಜಾವ ೪ ಗಂಟೆಯಿAದಲೇ ಭಕ್ತರು ತುಂತುರು ಮಳೆಯಲ್ಲಿಯೇ ಅಪ್ಪನ ಗುಡಿಯ ಗುಡಿಯ ಕಡೆಗೆ ಹೆಜ್ಜೆ ಹಾಕಲು ಶುರುವಿಟ್ಟರು. ಸ್ನಾನ ಮಾಡಿಕೊಂಡು ತಮ್ಮ ಮನೆಗಳಿಂದಲೇ ಗುಡಿಯವರಗೂ ಬರಿಗಾಲಿನಲ್ಲಿ ನಡೆದುಕೊಂಡು ಬಂದರು. ಸೂರ್ಯೋದಯದ ಹೊತ್ತಿಗೆ ದೇವಾಲಯ ಪರಿಸರದಲ್ಲಿ ಸಹಸ್ತಾರು ಭಕ್ತರು ಜಮಾಗೊಂಡಿದ್ದರಿAದ ಜಾತ್ರೆಯಂತೆ ಕಂಡು ಬಂದಿತು.
ಮಳೆ ಬರುತ್ತಿರುವುದರಿಂದ ಮಹಾದಾಸೋಹಿ ಶರಣಬಸವೇಶ್ವರರ ದರುಶನ ಪಡೆದುಕೊಳ್ಳಲು ಭಕ್ತರಿಗೆ ತೊಂದರೆಯಾಗದAತೆ ಸಂಸ್ಥಾನದ ಆಡಳಿತ ಮಂಡಳಿಯವರು ಸರದಿ ನಿಂತುಕೊಳ್ಳುವ ಮಾರ್ಗದಲ್ಲಿ ಟೆಂಟ್ ಹಾಕಿಸಲಾಗಿತ್ತು. ಪ್ರತಿಯೊಬ್ಬರು ಸರದಿಯಲ್ಲಿ ನಿಂತುಕೊಳ್ಳುವAತೆ ನೋಡಿಕೊಳ್ಳಲು ಬ್ಯಾರಿಕೇಡ್ ಅಳವಡಿಸಲಾಗಿತ್ತು. ಕ್ರಮೇಣ ಅಪ್ಪನ ಗುಡಿಗೆ ಬರುವ ಭಕ್ತರ ಸಂಖ್ಯೆಯೂ ಏರುತ್ತಿತ್ತು.ಶರಣರ ಸನ್ನಿಧಿಗೆ ವಿಶೇಷ ಅಭಿಷೇಕ ಪೂಜೆ ಮಾಡಿಸಿದ ನಂತರ ಬಂದ ಭಕ್ತರಿಗೆ ಅನ್ನ ದಾಸೋಹ ಮಾಡಿದರು. ಸಂಜೆ ಶ್ರದ್ಧಾ ಭಕ್ತಯಿಂದ ಉಚ್ಛಾಯಿ ಮೆರವಣಿಗೆ ಜರುಗಿತು.
ಕಲಬುರಗಿ ಜಿಲ್ಲೆಯ ಹಳ್ಳಿ-ಹಳ್ಳಿಗಳಿಂದ ಸೇರಿದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ, ವಿಜಯಪುರ, ಬಾಗಲಕೋಟ, ಬೀದರ್ ಜಿಲ್ಲೆಯ ಭಕ್ತರು ಪಾದಯಾತ್ರೆ ಮೂಲಕ ಕಲಬುರಗಿಗೆ ಆಗಮಿಸಿ ಶರಣನ ದರ್ಶನ ಪಡೆದುಕೊಂಡರು. ಶರಣಬಸವೇಶ್ವರ ಸಂಸ್ಥಾನದಲ್ಲಿ ಶ್ರಾವಣದ ಅಂಗವಾಗಿ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಕಲಬುರಗಿ ಜಿಲ್ಲೆಯ ಎಲ್ಲಡೆ ಶ್ರಾವಣ ಮಾಸದ ಅಂಗವಾಗಿ ಪುರಾಣ, ಪ್ರವಚನ ನಿರಂತರವಾಗಿ ನಡೆದುಕೊಂಡು ಬರುತ್ತಿವೆ.