ರಾಯಚೂರು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ಶ್ರೀ ಗುರು ರಾಘವೇಂದ್ರತೀರ್ಥರ ೪೦೪ ನೇ ಪಟ್ಟಾಭಿಷೇಕ ಮಹೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.
ಶ್ರೀಮಠದ ಪೀಠಾಽಪತಿ ಶ್ರೀ ಸುಬುಧೇಂದ್ರ ತೀರ್ಥರು ರಾಯರ ಪಾದುಕಾ ಪೂಜೆ ನೆರವೇರಿಸಿ, ಕನಕ, ಮುತ್ತು ರತ್ನಗಳ ಅಭಿಷೇಕ ನೆರವೇರಿಸಿ ಶಿರದಲ್ಲಿ ಪಾದುಕೆಗಳನ್ನು ಇರಿಸಿಕೊಂಡು ಭಕ್ತಿ ಸಮರ್ಪಿಸಿದರು.
ನಂತರ ಶ್ರೀಮಠದ ಪ್ರಾಕಾರದಲ್ಲಿ ಶ್ರೀರಾಯರ ಪಾದುಕೆಯಿರಿಸಿ ಸ್ವರ್ಣ ರಥೋತ್ಸವ ನೆರವೇರಿಸಲಾಯಿತು.
ಪೀಠಾಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಆಂಧ್ರದ ಐಟಿಬಿಟಿ ಸಚಿವ ನಾರಾ ಲೋಕೇಶ್ ಸೇರಿ ಅನೇಕರು ಭಾಗವಹಿಸಿ ಗುರುಗಳಿಗೆ ಭಕ್ತಿ ಸಮರ್ಪಿಸಿದರು.
ಭಕ್ತಗಳಿಗೆ ಮಂತಾಕ್ಷತೆ ವಿತರಣೆ
ಶ್ರೀರಾಮ ದೇವರ ಸಂಸ್ಥಾನ ಪೂಜೆ ನೆರವೇರಿಸಿದ ಶ್ರೀಗಳು ಭಕ್ತರಿಗೆ -Àಲ ಮಂತಾಕ್ಷತೆ ನೀಡಿ ಹರಸಿದರು. ರಾಯರ ಪಟ್ಟಾಭಿಷೇಕ ಮಹೋತ್ಸವದ ಸಂದರ್ಭ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ನದಿಪಾತ್ರದಲ್ಲಿ ಪುಣ್ಯ ಸ್ನಾನ ಮಾಡಿ ರಾಯರ ಮೂಲ ಬೃಂದಾವನದ ದರ್ಶನ ಪಡೆದರು. ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಭಕ್ತರು ಪಟ್ಟಾಭಿಷೇಕ ಮಹೋತ್ಸ ಕಣ್ತುಂಬಿಕೊಅಡರು.