ಹುನಗುಂದ ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಮಹಿಳೆಯರು ಆರತಿ ಬೆಳಗಿ ಉಡಿತುಂಬಿದರು. ದೇವಸ್ಥಾನದ ಅರ್ಚಕರಾದ ರಾಜು ಬಡಿಗೇರ, ಸಿದ್ದಪ್ಪ ಪೂಜಾರಿ, ಲಕ್ಮಪ್ಪ ಯಳಗುಂಡಿ ಇದ್ದರು. 
ಜಿಲ್ಲೆ

ಹುನಗುಂದ ದ್ಯಾಮವ್ವ ದೇವಿ ಉಡಿ ತುಂಬಿದ ಭಕ್ತರು

ಹುನಗುಂದ: ಪಟ್ಟಣದ ಗ್ರಾಮ ದೇವತೆ ಶ್ರೀ ದ್ಯಾಮವ್ವ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಸಕಲ ವಾದ್ಯಮೇಳದೊಂದಿಗೆ ಶುಕ್ರವಾರ ಸಂಜೆ ಸಂಭ್ರಮದಿಂದ ಜರುಗಿತು.

ಶಕ್ತಿ ದೇವತೆ ದ್ಯಾಮವ್ವ ದೇವಿಗೆ ವಿಶೇಷವಾಗಿ 5 ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ, ಕೊನೆಯ ವಾರದಂದು ಮಹಿಳೆಯರು ಆರತಿ ಬೆಳಗಿ ಉಡಿ ತುಂಬುವುದು ವಿಶೇಷವಾಗಿತ್ತು. ಆದ್ದರಿಂದ ಪಟ್ಟಣದ ಎಲ್ಲ ಸದ್ಭಕ್ತರು ಬೆಳಗ್ಗೆಯಿಂದಲೇ ದೇವಿಗೆ ನೈವೇದ್ಯ ನೀಡಿ ದರ್ಶನ ಪಡೆದರು.

ಕುಂಬಾರ ಓಣಿ, ಮೇಗಲಪೇಟಿಯ ಹಾಗೂ ಊರಿನ ಗಣ್ಯರು ಸಂಜೆ ಸಕಲ ವಾದ್ಯಮೇಳದೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ದೇವಿಗೆ ಊಡಿತುಂಬಿದರು. ದೇವಸ್ಥಾನದ ಅರ್ಚಕರಾದ ರಾಜು ಬಡಿಗೇರ ಪೂಜೆ ನೆರವೇರಿಸಿದರು.