ಭಕ್ತರ ಸಂಖ್ಯೆ ಕಡಿಮೆಯಾಗಿದ್ದರಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ರಥಬೀದಿ ಬಿಕೋ ಎನ್ನುತ್ತಿತ್ತು 
ಜಿಲ್ಲೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆ ವಿರಳ

ಇಂದಿರಾ ಎನ್ ಕೆ

ಸುಬ್ರಹ್ಮಣ್ಯ: ಲೋಕಸಭಾ ಚುನಾವಣೆಯ ಕಾರಣ ಶುಕ್ರವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು. ಕಡಿಮೆ ಸಂಖ್ಯೆಯ ಭಕ್ತರ ಕಾರಣ ಕೆಲವೊಂದು ಅಂಗಡಿಗಳೂ ಮುಚ್ಚಿತ್ತು.

ಉತ್ತರ ಕರ್ನಾಟಕ ಭಾಗದ ಭಕ್ತರು ಅಲ್ಪ ಪ್ರಮಾಣದಲ್ಲಿ ಕ್ಷೇತ್ರದಲ್ಲಿ ಕಂಡು ಬಂದರು. ಸ್ಥಳೀಯ ಭಕ್ತರು ಮತದಾನ ಬಳಿಕ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಪ್ರತಿದಿನ ಜನಜಂಗುಳಿಯಿಂದ ಗಿಜಿಗುಟ್ಟುತ್ತಿದ್ದ ಕುಕ್ಕೆಯ ಬಸ್ ನಿಲ್ದಾಣ ಶುಕ್ರವಾರ ಪ್ರಯಾಣಿಕರ ಸಂಖ್ಯೆ ವಿರಳವಾಗಿ ಬಿಕೋ ಎನ್ನುತ್ತಿತ್ತು. ಚುನಾವಣಾ ಕರ್ತವ್ಯಕ್ಕೆ ಬಸ್‌ಗಳನ್ನು ನಿಯೋಜಿಸಿದ್ದರಿಂದ ಬಸ್‌ಗಳ ಸಂಖ್ಯೆಯೂ ಕಡಿಮೆಯಾಗಿತ್ತು.