ಅಮ್ಮನವರಿಗೆ ಹೂವಿನ ಸೀರೆಯಿಂದ ಅಲಂಕಾರ ಮಾಡಲಾಗಿತ್ತು.  
ಜಿಲ್ಲೆ

ತ್ರಿಪುರ ಸುಂದರಿ ದೇಗುಲಕ್ಕೆ ಭಕ್ತರ ದಂಡು

ಮೂಗೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇಗುಲಕ್ಕೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದರು.

ಧನುರ್ಮಾಸ ಹಾಗೂ ಹೂಸ ವರ್ಷದ ಅಂಗವಾಗಿ ಅಮ್ಮನವರಿಗೆ ಹೂವಿನ ಸೀರೆಯಿಂದ ಅಲಂಕಾರವನ್ನು ಮಾಡಲಾಗಿತ್ತು. ಮುಂಜಾನೆಯಿಂದಲೇ ಅಭಿಷೇಕ, ವಿಶೇಷ ಪೂಜೆಗಳು ನಡೆದವು. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರಿಂದ ಕೆಲಕಾಲ ದರ್ಶನ ಪಡೆಯಲು ನುಕ್ಕುನುಗ್ಗಲು ಉಂಟಾಯಿತು.

ಪ್ರತಿ ವರ್ಷದಂತೆ ಈ ಬಾರಿಯೂ ಅಪಾರ ಸಂಖ್ಯೆಯಲ್ಲಿ ದೇವಾಲಯಕ್ಕೆ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಲು ಮುಗಿಬಿದ್ದರು. ಶ್ರೀ ದೇಶೇಶ್ವರಸ್ವಾಮಿ ಹಾಗೂ ಪಾರ್ವತಿ ದೇವಿಯ ದೇಗುಲದಲ್ಲೂ ಜನಸ್ತೋಮ ಕಂಡುಬಂತು.

ದೇವಾಲಯ ಆವರಣದಲ್ಲಿ ಭಕ್ತರಿಗೆ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದ ಪರಿಣಾಮ ಪಾದಚಾರಿಗಳು ಕಿರಿಕಿರಿ ಅನುಭವಿಸುವಂತಾಯಿತು.