ಸಹಪರಿವಾರ ಶ್ರೀ ಜಂಗಮೇಶ್ವರ ದೇವಸ್ಥಾನ ಜಂಗಮೋತ್ಸವ 2025 ಸಭಾ ಕಾರ್ಯಕ್ರಮದಲ್ಲಿ ನಿಕಟಪೂರ್ವ ಜಿಪಂ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಮಾತನಾಡಿದರು. 
ಜಿಲ್ಲೆ

ದೇವಸ್ಥಾನ ಅಭಿವೃದ್ಧಿಗೆ ಭಕ್ತರ ಸಹಕಾರ

ಇಂದಿರಾ ಎನ್ ಕೆ

ಕೊಕ್ಕರ್ಣೆ: ಸಹಪರಿವಾರ ಶ್ರೀ ಜಂಗಮೇಶ್ವರ ದೇವಸ್ಥಾನ ಅತೀ ಕಡಿಮೆ ಅವಧಿಯಲ್ಲಿ ಭಕ್ತರ ಹಾಗೂ ದಾನಿಗಳ ಸಹಕಾರದಿಂದ ಜೀರ್ಣೋದ್ಧಾರಗೊಂಡು 10 ವರ್ಷ ಸಂದಿದೆ. ಮುಂದಿನ 2027ರಲ್ಲಿ ಬ್ರಹ್ಮಕಲಶ ಮತ್ತಿತರ ಕಾರ್ಯಕ್ರಮ ನಡೆಯಬೇಕಿದ್ದು, ಭಕ್ತರ ಹಾಗೂ ದಾನಿಗಳ ಸಹಕಾರ ಅಗತ್ಯ ಎಂದು ಜಿಪಂ ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಹೇಳಿದರು.

ಸಹಪರಿವಾರ ಶ್ರೀ ಜಂಗಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಜಂಗಮ ಉತ್ಸವದಲ್ಲಿ ಮಾತನಾಡಿದರು. ಉತ್ಸವ ಸಮಿತಿ ಜಂಗಮೇಶ್ವರ ದೇವಸ್ಥಾನ ನಾಲ್ಕೂರು ಅಧ್ಯಕ್ಷ ಉಮೇಶ ಆಚಾರ್ಯ ಚಾಕ್ಟಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ನೇತಾಜಿ ಸೇವಾ ವೇದಿಕೆ ನಾಲ್ಕೂರು ಸ್ಥಾಪಕ ಅಧ್ಯಕ್ಷ ಪ್ರಸಾದ್ ಹೆಗ್ಡೆ ಮಾರಾಳಿ, ಅಧ್ಯಕ್ಷ ಅವಿನಾಶ್ ರಾವ್ ಮುದ್ದೂರು, ನಿವೃತ್ತ ಮುಖ್ಯ ಶಿಕ್ಷಕ ಎನ್.ಕರುಣಾಕರ ಶೆಟ್ಟಿ ಕಜ್ಕೆ, ರೋಟರಿ ಕ್ಲಬ್ ಕೊಕ್ಕರ್ಣೆ ಅಧ್ಯಕ್ಷ ಕಾಶೀನಾಥ ಶೆಣೈ ಕಜ್ಕೆ, ನಾಗಾರಾಧಕ ಡಾ.ಬಾಲಕೃಷ್ಣ ವೈದ್ಯ, ನಾಲ್ಕೂರು ಗ್ರಾಪಂ ಅಧ್ಯಕ್ಷೆ ಶೋಭಾ ಕೆ.ಪೂಜಾರಿ, ಮಾಜಿ ಅಧ್ಯಕ್ಷೆ ಪ್ರತಿಮಾ ರವಿಚಂದ್ರ ಆಚಾರ್ಯ, ಉದ್ಯಮಿ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿವರ

ಬುಧವಾರ ರುದ್ರಾಭಿಷೇಕ, ನಾಗನ ಸಾನ್ನಿಧ್ಯದಲ್ಲಿ ನವಕ ಪ್ರಧಾನ ಹೋಮ, ಮಧ್ಯಾಹ್ನ ತುಲಾಭಾರ ಸೇವೆ, ಮಹಾಪೂಜೆ, ಸಂಜೆ ಭಜನಾ ಕಾರ್ಯಕ್ರಮ, ಗುರುವಾರ ಬೆಳಗ್ಗೆ ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಚನಾ, ಗಣಪತಿ, ವನದುರ್ಗಾ ಹೋಮ, ಜಂಗಮೇಶ್ವರ ಸಾನ್ನಿಧ್ಯದಲ್ಲಿ ಪಂಚವಿಂಶತಿ ಕಲಶ, ಶತರುದ್ರಾಭಿಷೇಕ, ಕಲಾತತ್ವ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಮಂಗಳಾರತಿ, ಅನ್ನಸಂತರ್ಪಣೆ, ಮಧ್ಯಾಹ್ನ 3ರಿಂದ ವಿವಿಧ ಭಜನಾ ತಂಡದ ಮೆರವಣಿಗೆಯೊಂದಿಗೆ ದೇವರ ರಥೋತ್ಸವ, ರಾಜ್ಯಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ ಮಂಗಳೂರು ಅವರಿಂದ ಪರಮಾತ್ಮೆ ಪಂಜುರ್ಲಿ ಪೌರಾಣಿಕ ಕನ್ನಡ ನಾಟಕ, ರಾತ್ರಿ ರಂಗಪೂಜಾ ಬಲಿ, ಹಣಬು ಸೇವೆ ಕಾರ್ಯಕ್ರಮ ಜರುಗಿತು.