ಪುತ್ತೂರು ಗ್ರಾಮಾಂತರ: ದ.ಕ. ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿರುವ ಕೋಡಿಂಬಾಡಿ ಶ್ರೀ ಮಹಿಷಮರ್ದಿನಿ ದೇವಿಗೆ ಭಕ್ತರ ಸಹಕಾರದೊಂದಿಗೆ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ಕವಚ ನಿರ್ಮಾಣ ಮಾಡುವುದೆಂದು ಭಾನುವಾರ ಕ್ಷೇತ್ರದಲ್ಲಿ ನಡೆದ ಭಕ್ತರ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಯಿತು.
ಮಹಿಷಮರ್ದಿನಿ ದೇವಿಗೆ ಚಿನ್ನದ ಕವಚ ನಿರ್ಮಾಣ ಮಾಡಬೇಕೆಂಬ ಸಂಕಲ್ಪದ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ಭಕ್ತರ ಸಮಾಲೋಚನಾ ಸಭೆ ನಡೆಯಿತು.
ದೇವಿಗೆ ಚಿನ್ನದ ಕವಚ ನಿರ್ಮಾಣ ಕಾರ್ಯವು ಒಂದು ವರ್ಷ ಕಾಲಾವಧಿಯೊಳಗೆ ಪೂರ್ಣಗೊಳ್ಳಲಿದೆ. ಭಕ್ತರೆಲ್ಲರ ಸಹಕಾರದಿಂದ ಈ ಕಾರ್ಯ ನಡೆಯಲಿದೆ ಎಂದು ತಿಳಿಸಿದ ಅಶೋಕ್ ಕುಮಾರ್ ರೈ, ತಾನು ಚಿನ್ನದ ಕವಚ ನಿರ್ಮಾಣಕ್ಕೆ 35 ಲಕ್ಷ ರೂ. ನೀಡುವುದಾಗಿ ೋಷಣೆ ಮಾಡಿದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು, ಅರ್ಚಕ ರಾಮಕೃಷ್ಣ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವದಾಸ ಪಿಲಿಗುಂಡ, ಕುಮಾರನಾಥ ಎಸ್.ಪಲ್ಲತ್ತಾರು, ರೇಣುಕಾ ಮುರಳೀಧರ್ ರೈ, ಸತೀಶ್ ನಾಯ್ಕ ಮೋನಡ್ಕ, ವಿಜಯಾ ನಾಯ್ಕ, ಕೇಶವ ಭಂಡಾರಿ ಕೈಪ, ಡಾ.ರಾಜಾರಾಮ್ ಕೆ.ಬಿ., ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಧರ್ಮದೈವ ಸಮಿತಿ ಗೌರವಾಧ್ಯಕ್ಷ ಮುರಳೀಧರ್ ರೈ ಮಠಂತಬೆಟ್ಟು, ಜಗನ್ನಾಥ ಶೆಟ್ಟಿ ನಡುಮನೆ, ಉಲ್ಲಾಸ್ ಕೋಟ್ಯಾನ್, ಸುದೇಶ್ ಕುಮಾರ್ ಶಾಂತಿನಗರ, ಕೇದಗೆ ರಾಜೀವ ಶೆಟ್ಟಿ, ಸದಾಶಿವ ರೈ, ಯೋಗೀಶ್ ಸಾಮಾನಿ, ಶಿವಪ್ರಸಾದ್ ಕೋಡಿಂಬಾಡಿ, ಪ್ರತೀಕ್ಷ್, ಪ್ರಭಾಕರ ಸಾಲ್ಯಾನ್, ಯತೀಶ್ ಶೆಟ್ಟಿ ಮತ್ತಿತರರಿದ್ದರು. ದೇವಸ್ಥಾನ ವ್ಯವಸ್ಥಾಪಕ ಸಂತೋಷ್ ಶೆಟ್ಟಿ ಸ್ವಾಗತಿಸಿದರು.