ಜಿಲ್ಲೆ

ಭಕ್ತರು ಪ್ರಾಣಿ ಬಲಿ ಕೊಡಬಾರದು

ಎಂ.ಎಸ್​.ಹಿರೇಮಠ ಬೆಳಗಾವಿ

ಕಕ್ಕೇರಿ: ಗ್ರಾಮದ ಶ್ರೀ ಬಿಷ್ಠಾದೇವಿ ಹಾಗೂ ಸಹೋದರಿ ಮೂಕಮ್ಮದೇವಿ ಜಾತ್ರೆಯಲ್ಲಿ ದೇವರ ಹೆಸರಲ್ಲಿ ಭಕ್ತರು ಪ್ರಾಣಿ ಬಲಿ ಕೊಡಬಾರದು. ಅಂತಹ ಟನೆ ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್​ ದುಂಡಪ್ಪ ಕೊಮಾರ ಎಚ್ಚರಿಕೆ ನೀಡಿದರು.

ಇಲ್ಲಿನ ಗ್ರಾಪಂ ಸಭಾ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಶ್ರೀ ಬಿಷ್ಠಾದೇವಿ ಹಾಗೂ ಸಹೋದರಿ ಮೂಕಮ್ಮದೇವಿ ಜಾತ್ರೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಿಪಿಐ ಎಸ್​.ಸಿ.ಪಾಟೀಲ ಮಾತನಾಡಿ, ಜಾತ್ರೆ ಹಿನ್ನೆಲೆಯಲ್ಲಿ ಈಗಾಗಲೇ ವಾಹನಗಳಿಗೆ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗಿದೆ. ಸುಗಮ ಸಂಚಾರದ ದೃಷ್ಟಿಯಿಂದ ಜಾತ್ರೆಯಲ್ಲಿ ರಸ್ತೆ ಅಕ್ಕ ಪಕ್ಕದ 15 ಅಡಿ ಅಂತರ ಬಿಟ್ಟು ಅಂಗಡಿಗಳಿಗೆ ಜಾಗ ನೀಡಬೇಕು ಎಂದು ತಿಳಿಸಿದರು.

ಗ್ರಾಪಂ ಅಧ್ಯೆ ಕವಿತಾ ಹಂಚಿನಮನಿ, ಹೆಸ್ಕಾಂ ವಲಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಕಮ್ಮಾರ, ಟಿಎಚ್​ಒ ಮಹೇಶ ಕಿವಡಸನ್ನವರ, ಮಂದಿರದ ಅಧ್ಯ ಕಾರ್ತಿಕ ಅಂಬೋಜಿ ಮಾತನಾಡಿದರು.

ಸಂಜೀವ ಬೊಂಗಾಳೆ, ಅರ್ಚನಾ ಪಾಟೀಲ, ಎಎಸ್​ಐ. ಬಿ.ಬಿ.ಆರೇರ, ನಾಗರಾಜ ಬೆಳವಡಿ, ಶಿವಕುಮಾರ ಬಳ್ಳಾರಿ, ನಾಗರಾಜ ಭಜಂತ್ರಿ, ಕರವೀರ ಗಂದಿಗವಾಡ, ಕಂದಾಯ ನಿರೀಕ ಬಿ.ಎನ್​.ಸೀಮಾನಿ, ಗ್ರಾಮ ಆಡಳಿತಾಧಿಕಾರಿ ರಾಜೇಶ ಯು, ಹೆಸ್ಕಾಂ ಎಇಇ ಲಕ್ಷಿ$್ಮ ರಂಗನಾಥ, ಗ್ರಾಪಂ ಉಪಾಧ್ಯೆ ಬಿಷ್ಟವ್ವ ಕೊಪ್ಪದ, ಮಾಜಿ ಅಧ್ಯ ಭೀಮಪ್ಪ ಅಂಬೋಜಿ, ಗ್ರಾಪಂ ಸದಸ್ಯರಾದ ರಿಯಾಜ್​ಅಹ್ಮದ ಪಟೇಲ್​, ದಯಾನಂದ ಗುಪಿತ, ಗುರುಸಿದ್ಧ ತಳವಾರ, ಭದ್ರು ದೊಡ್ಡಮನಿ ಇತರರಿದ್ದರು. ಬಸವರಾಜ ಅಂಬಡಗಟ್ಟಿ ಸ್ವಾಗತಿಸಿದರು. ಆಜಾದ್​ ಸೌದಾಗಾರ ನಿರೂಪಿಸಿದರು. ಇಲಿಯಾಸ್​ ಮುಲ್ಲಾ ವಂದಿಸಿದರು.