ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಪ್ರತಿ ಕುಟುಂಬಕ್ಕೂ ಗ್ಯಾಸ್ ಸಿಲಿಂಡರ್ ಎಷ್ಟು ಉಪಯೋಗವೋ, ಅದೇ ರೀತಿ ಅದರ ಬಗ್ಗೆ ಅರಿವಿಲ್ಲದೆ ನಿರ್ಲಕ್ಷ್ಯ ವಹಿಸಿದರೂ ಅಪಾಯಕಾರಿ ಎಂದು ದೇವನಹಳ್ಳಿ ಪ್ರಶಾಂತ ನಗರದ ಎಸ್‌ಎಲ್‌ಎನ್‌ಎಸ್ ಗ್ಯಾಸ್ ಏಜೆನ್ಸಿ ಮಾಲೀಕ ಎನ್.ಶ್ರೇಯಸ್ ಹೇಳಿದರು.
ಪಟ್ಟಣದ ಪ್ರಶಾಂತ ನಗರದ ಬಡಾವಣೆಯಲ್ಲಿ ಅಡುಗೆ ಅನಿಲ ಬಳಕೆ ಸುರಕ್ಷತೆ ಅರಿವು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಡುಗೆ ಅನಿಲ ಒಂದು ದೊಡ್ಡ ಬಾಂಬ್‌ಗೆ ಸಮ. ಅದರ ಬಳಕೆ ಹಾಗೂ ತಪಾಸಣೆ ಬಗ್ಗೆ ಅಥವಾ ಅನಿಲ ಸೋರಿಕೆ ಮತ್ತಿತರ ಸಮಸ್ಯೆಗಳ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡು ಅಡುಗೆ ಅನಿಲ ಸರಬರಾಜುದಾರರಿಗೆ ಕರೆ ಮಾಡಿ ಸರಿಪಡಿಸಿಕೊಂಡರೆ ಸಂಭವಿಸಬಹುದಾದ ಅನಾಹುತ ತಡೆಯಬಹುದು ಎಂದರು.
ಮಾಹಿತಿಗೆ 96862 72616, 080 27680801, 080 27680802ಗೆ ಸಂಪರ್ಕಿಸಿ ಅಡುಗೆ ಅನಿಲ ಪರಿಕರ ತಪಾಸಣೆ ಮಾಡಿಸಿಕೊಂಡು ಸುರಕ್ಷತೆಯ ಖಾತ್ರಿ ಪಡೆಯಬಹುದಾಗಿದೆ ಎಂದರು.