ಜಿಲ್ಲೆ

ನಾಳೆ ಸಾಹಿತ್ಯಕೂಟದಲ್ಲಿ ದೇವ ನಾಮ ಗಾಯನ

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ

ನಗರದ ಎನ್.ಅರ್.ಬಡಾವಣೆಯ ಶ್ರೀಬ್ರಹ್ಮಚೈತನ್ಯ ಶ್ರೀರಾಮ ಮಂದಿರದ, ಹರಿಕೀರ್ತನ ಮಂದಿರದ ಮೊದಲನೆಯ ಮಹಡಿಯಲ್ಲಿ ಜು.19ರಂದು ಶನಿವಾರ ಸಂಜೆ 4.30 ಗಂಟೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ದಿ.ವೈ.ಎಸ್.ಗುಂಡಪ್ಪ ಸ್ಥಾಪನೆಯ ಶನಿವಾರದ ಕಾರ್ಯಕ್ರಮದ ಸಾಹಿತ್ಯಕೂಟದಲ್ಲಿ 3573ನೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಫ್ಟ್ ವೇರ್ ಇಂಜಿನಿಯರ್ ಕೆ.ವಿ.ನರೇಶ್‌ಕುಮಾರ್ ಅವರಿಂದ ಭಕ್ತಿಗೀತೆಗಳ ಗಾಯನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಬ್ರಹ್ಮಚೈತನ್ಯ ಶ್ರೀರಾಮ ಮಂದಿರದ ಉಪಾಧ್ಯಕ್ಷ ಜಿ.ಎಚ್.ರಘುನಾಥ ವಹಿಸಲಿದ್ದಾರೆ ಎಂದು ಚಿಂತಾಮಣಿ ಸಾಹಿತ್ಯಕೂಟ ತಿಳಿಸಿದೆ.