ಜಿಲ್ಲೆ

ಸುತಗಟ್ಟಿಯಲ್ಲಿ ದೇವಿ ಉತ್ಸವ

Dharwada - Basavaraj Idli

ಹುಬ್ಬಳ್ಳಿ: ತಾಲೂಕಿನ ಸುತಗಟ್ಟಿಯ ಶ್ರೀ ಗ್ರಾಮದೇವಿ ದ್ಯಾಮವ್ವನ ಉಡಿ ತುಂಬುವ ಉತ್ಸವ ಮೇ 28ರಂದು ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 6ಕ್ಕೆ ಗ್ರಾಮದ ಎಲ್ಲ ದೇವಸ್ಥಾನಗಳ ದೇವರ ಪಲ್ಲಕ್ಕಿ ಉತ್ಸವ ಜರುಗಲಿದೆ. ವಿವಿಧ ವಾದ್ಯಮೇಳ ಹಾಗೂ ಸುಮಂಗಲೆಯರಿಂದ ಕುಂಭ ಮೇಳ ನಡೆಯಲಿದೆ.

ಪಲ್ಲಕ್ಕಿ ಉತ್ಸವ ದ್ಯಾಮವ್ವನ ದೇವಸ್ಥಾನ ತಲುಪಿದ ನಂತರ ಪೂಜೆ ಸಲ್ಲಿಸಿ ಭಂಡಾರದ ಓಕುಳಳಿಯೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಸಾಗಲಿದೆ. ದ್ಯಾಮವ್ವನ ಉಡಿ ತುಂಬಿದ ನಂತರ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.