ತರೀಕೆರೆ: ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಕ್ಷೇತ್ರದ ಜನತೆ
ಪಡೆದುಕೊಳ್ಳಲು ಯೋಜನೆ ರೂಪಿಸಿರುವ ಜತೆಗೆ ರಸ್ತೆ ಇನ್ನಿತರ ಅಭಿವೃದ್ಧಿ
ಕಾಮಗಾರಿಗಳಿಗೂ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್
ಹೇಳಿದರು.
ತಾಲೂಕಿನ ಲಕ್ಕವಳ್ಳಿ ಗ್ರಾಮದ ಎಂ.ಎನ್.ಕ್ಯಾಂಪ್, ಗಾಂಧಿನಗರ ಹಾಗೂ ರಂಗೇನಹಳ್ಳಿ
ಗ್ರಾಮದಲ್ಲಿ ಸಿಎಂ ವಿಶೇಷ ಯೋಜನೆಯಡಿ ಬಿಡುಗಡೆಯಾದ ಒಟ್ಟು 87 ಲಕ್ಷ ರೂ.
ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಾಂಕ್ರಿಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
ನೆರವೇರಿಸಿ ಮಾತನಾಡಿ, ಶಾಸಕನಾದ ಎರಡು ವರ್ಷಗಳ ಅವಧಿಯಲ್ಲಿ ಲಕ್ಕವಳ್ಳಿ
ಗ್ರಾಮದ ರಸ್ತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ 1.83 ಕೋಟಿ ರೂ. ಅನುದಾನ
ನೀಡಲಾಗಿದೆ. ಇದೀಗ ಲಕ್ಕವಳ್ಳಿ ತಮಿಳು ಶಾಲೆ ಸಮೀಪದ ಕೆರೆಯಿಂದ ಭದ್ರಾ
ಜಲಾಶಯದವರೆಗಿನ ರಸ್ತೆ ಮತ್ತು ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ 2.80 ಕೋಟಿ
ರೂ ಅಳವಡಿಸಲಾಗಿದ್ದು, ಸದ್ಯದಲ್ಲೇ ಟೆಂಡರ್ ಕರೆದು ಕೆಲಸ ಆರಂಭಿಸಲಾಗುವುದು
ಎಂದು ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷ ಅಬ್ದುಲ್ ರೆಹಮಾನ್, ಸದಸ್ಯರಾದ ಕೆ.ಶಿವಕುಮಾರ್,
ಬಿ.ಎಸ್.ವೆಂಕಟೇಶ್, ಕೆಪಿಸಿಸಿ ಮಾಜಿ ಸದಸ್ಯ ಎಂ.ರಂಗಪ್ಪ, ಲಕ್ಕವಳ್ಳಿ ಹೋಬಳಿ
ಕಾಂಗ್ರೆಸ್ ಅಧ್ಯಕ್ಷ ಎಚ್.ಎನ್.ಮಂಜುನಾಥ್, ಮಾಜಿ ತಾ.ಪಂ ಅಧ್ಯಕ್ಷ ಅನ್ಬು,
ಪ್ರಮುಖರಾದ ಸಿರಾಜ್, ಹನ್ೀ ಮತ್ತಿತರರಿದ್ದರು.