ಜಿಲ್ಲೆ

ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಚಾಲನೆ,  3 ಕೋಟಿ ರೂ. ಅನುದಾನದಲ್ಲಿ ಬಿಡನಾಳ ಕೆರೆ ಸುಧಾರಣೆ

Dharwada - Basavaraj Idli

ಹುಬ್ಬಳ್ಳಿ: ನಗರದ ಜನರ ಬೇಡಿಕೆಯಂತೆ 3 ಕೋಟಿ ರೂ. ಅನುದಾನದಲ್ಲಿ ಬಿಡನಾಳ ಕೆರೆಯನ್ನು ಹೈಟೆಕ್ ಮಾಡಲಾಗುವುದು ಎಂದು ಸ್ಲಮ್ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಪೂರ್ವ ವಿಧಾನಸಭಾ ಕ್ಷೇತ್ರದ 82ನೇ ವಾರ್ಡಿನ ಸಿದ್ಧಾರೂಢ ಕಾಲನಿಯಲ್ಲಿ 50 ಲಕ್ಷ ರೂ. ವೆಚ್ಚದ ಯುಜಿಡಿ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಸಿದ್ಧಾರೂಢ ಕಾಲನಿಗೆ ಹೊಂದಿಕೊಂಡಿರುವ ಕೆರೆಯನ್ನು ಮಾದರಿಯಾಗಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹೇಳಿದರು.

ಜನರ ಆಶಯದಂತೆ ಯುಜಿಡಿ, ರಸ್ತೆ, ನೀರು ಪೂರೈಕೆ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ ಎಂದರು.
ಪಾಲಿಕೆ ಸದಸ್ಯರು, ಅಧಿಕಾರಿಗಳು, ಸ್ಥಳಿಯ ಮುಖಂಡರು, ಇದ್ದರು.