ಅರಸೀಕೆರೆ ಗ್ರಾಮಾಂತರ ತಾಲೂಕಿನ ಕಸಬಾ ಹೋಬಳಿಯ ಯಳವಾರೆ ಗ್ರಾಮದ ಹುಚ್ಚಮ್ಮ ದೇಗುಲದ ಆವರಣದಲ್ಲಿ ಅಡುಗೆ ಮನೆ ಕಾಮಗಾರಿಗೆ ಶಾಸಕ ಶಿವಲಿಂಗೇಗೌಡ ಭೂಮಿಪೂಜೆ ನೆರವೇರಿಸಿದರು. ಕೇಶವಣ್ಣ,ಧರ್ಮಶೇಖರ, ಬೈರೇಶ್, ನಾಗರಾಜ್ ಹಾಗೂ ಗ್ರಾಮಸ್ಥರು ಇದ್ದರು. 
ಜಿಲ್ಲೆ

ಅಭಿವೃದ್ಧಿ ಕಾಮಗಾರಿ ನಡೆಯುತ್ತಲೇ ಇವೆ

ಶಿವಶಂಕರ್ ಎಂ. ಹೆಬ್ಬಳ್ಳ

ಅರಸೀಕೆರೆ ಗ್ರಾಮಾಂತರ: ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಕೆಲವರು ಟೀಕೆ ಮಾಡುತ್ತಾರೆ. ಆದರೆ, ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಲೇ ಇವೆ ಎಂದು ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಸಮರ್ಥಿಸಿಕೊಂಡರು.

ತಾಲೂಕಿನ ಕಸಬಾ ಹೋಬಳಿ ಯಳವಾರೆ ಗ್ರಾಮದ ಹುಚ್ಚಮ್ಮದೇಗುಲ ಆವರಣದಲ್ಲಿ ಭಾನುವಾರ ಭೋಜನ ಮಂದಿರದ ಅಡುಗೆ ಮನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಹುಚ್ಚಮ್ಮ ದೇಗುಲದಲ್ಲಿ ಪ್ರತಿ ಅಮಾವಾಸ್ಯೆಯಂದು ಬರುವ ಮೂರರಿಂದ ನಾಲ್ಕು ಸಾವಿರಭಕ್ತರಿಗೆ ಅನ್ನ ಸಂತರ್ಪಣೆ ಮಾಡಲು ಈ ಭೋಜನ ಮಂದಿರ ಅತ್ಯವಶ್ಯಕ ಎಂದರು.

ಅಧಿಕಾರ ಶಾಶ್ವತವಲ್ಲ, ನಾವು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ದೇನೆ ಎಂಬುದು ಮುಖ್ಯ ಎಂದು ಹೇಳಿದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ಧರ್ಮಶೇಖರ್, ಮುಖಂಡರಾದ ಕೇಶವಣ್ಣ, ನಾಗರಾಜು, ಬೈರೇಶ್, ಪಟೇಲ್ ಮಂಜಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.