ಸವಣೂರ: ಭಕ್ತರ ಹಾಗೂ ದಾನಿಗಳ ಸಹಕಾರದಿಂದ ಕಾರಡಗಿ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸನಗೌಡ ಪಾಟೀಲ ಹೇಳಿದರು.
ತಾಲೂಕಿನ ಕಾರಡಗಿ ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ, ಸಾಮಾಜಿಕ ಕಾರ್ಯಕರ್ತರಾದ ಪುಟ್ಟಯ್ಯ ಗುಮತಿಮಠ ಹಾಗೂ ಜಿ.ವಿ.ಪಾಟೀಲ ಅವರನ್ನು ಸನ್ಮಾನಿಸಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದ ಶ್ರೀಕ್ಷೇತ್ರದಲ್ಲಿ ಸರ್ಕಾರದ ಸುಮಾರು 3 ಕೋಟಿ ರೂ. ಅನುದಾನದಲ್ಲಿ ಯಾತ್ರಿ ನಿವಾಸ ಕಟ್ಟಣ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಭಕ್ತರ ಸಹಕಾರ ಹಾಗೂ ದಾನಿಗಳ ನೆರವಿನಿಂದ ಟ್ರಸ್ಟ್ ಕಮಿಟಿ ವತಿಯಿಂದ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
ಸಾಮಾಜಿಕ ಕಾರ್ಯಕರ್ತರಾದ (ದಾನಿ)ಪುಟ್ಟಯ್ಯ ಗುಮತಿಮಠ ಹಾಗೂ ಜಿ.ವಿ. ಪಾಟೀಲ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಟ್ರಸ್ಟ್ ಕಮಿಟಿ ಪದಾಧಿಕಾರಿಗಳಾದ ಎಲ್.ಸಿ. ಕುರವತ್ತಿ, ರಾಘವೇಂದ್ರಗೌಡ ಪಾಟೀಲ, ವೇಂಕಟೇಶ ಕುಲಕರ್ಣಿ, ಮಹೇಶ ಮುದಗಲ್, ಈರಣ್ಣ ತೊಂಡೂರ, ಉಮೇಶ ಹಿರೇಮಠ, ಶಂಕ್ರಪ್ಪ ಅಗಸಿಬಾಗಿಲ, ಬಸಟೆಪ್ಪ ಅತ್ತಿಗೇರಿ, ವೀರನಗೌಡ ಪಾಟೀಲ, ಕರಬಸಪ್ಪ ಅರಳಿಕಟ್ಟಿ ಇತರರು ಇದ್ದರು.