ತೋರಣಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಅಲ್ಲಮಪ್ರಭು ಸ್ವಾಮೀಜಿ, ಸಂಪಾದನಾ ಸ್ವಾಮೀಜಿ, ಲಕ್ಷ್ಮೀ ಮಜಲಟ್ಟಿ, ಬಸವಪ್ರಭು ಕುಂಡ್ರುಕ ಇತರರಿದ್ದರು. 
ಜಿಲ್ಲೆ

ಅಭಿವೃದ್ಧಿ ಕಾರ್ಯ ನಿರಂತರವಾಗಲಿ

ಪ್ರಶಾಂತ ಹೂಗಾರ

ಚಿಕ್ಕೋಡಿ: ಚಿಕ್ಕೋಡಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಮತ್ತೊಂದು ಹೆಸರೇ ಪ್ರಕಾಶ ಹುಕ್ಕೇರಿ. ಅವರು ಉತ್ತರ ಕರ್ನಾಟಕದ ಜನನಾಯಕರಾಗಲಿ. ಅವರ ಅಭಿವೃದ್ಧಿ ಕಾರ್ಯ ನಿರಂತರವಾಗಲಿ ಎಂದು ನಿಡಸೋಸಿ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ತೋರಣಹಳ್ಳಿ ಗ್ರಾಮದಲ್ಲಿ ಶನಿವಾರ ಸ್ಥಳೀಯ ಎಂಎಲ್‌ಸಿ ಪ್ರದೇಶಾಭಿವೃದ್ಧಿ ಯೋಜನೆಯಡಿ ಹನುಮಾನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮಂಜೂರಾದ 10 ಲಕ್ಷ ರೂ.ಅನುದಾನದ ಆದೇಶ ಪ್ರತಿ ಹಸ್ತಾಂತರ ಹಾಗೂ ತೋರಣಹಳ್ಳಿ ಗ್ರಾಮದಿಂದ ಚಿಂಚಣಿವರೆಗೆ 2 ಕೋಟಿ ರೂ ಅನುದಾನದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿದರು. ಚಿಂಚಣಿ ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ, ಚಿಕ್ಕೋಡಿ ಸಂಪಾದನಾ ಸ್ವಾಮೀಜಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಲಕ್ಷ್ಮೀ ಮಜಲಟ್ಟಿ, ಉಪಾಧ್ಯಕ್ಷೆ ಅವ್ವಕ್ಕ ಜೋಗೆ, ಪಿಕೆಪಿಎಸ್ ಅಧ್ಯಕ್ಷ ಬಸವಪ್ರಭು ಕುಂಡ್ರುಕ, ತಾಪಂ ಮಾಜಿ ಸದಸ್ಯ ರಾಜು ಪಾಟೀಲ, ಪುಟ್ಟು ಪಾಟೀಲ, ಎಂ.ಎಚ್.ಪಟೇಲ, ನಾನಾಗೌಡ ಪಾಟೀಲ, ರಾಜು ಕೋಟಗಿ ಇತರರಿದ್ದರು.