ಬೋರಗಾಂವ: ರೈತರು, ಸದಸ್ಯರು ಮತ್ತು ಜನ ಸಾಮಾನ್ಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ದಿ.ರಾವಸಾಹೇಬ ಪಾಟೀಲ ೧೯೯೦ರಲ್ಲಿ ಅರಿಹಂತ ಸಹಕಾರಿ ಸಂಸ್ಥೆ ಸ್ಥಾಪಿಸಿದ್ದಾರೆ ಎಂದು ಮಾಜಿ ಗ್ರಾಪಂ ಅಧ್ಯಕ್ಷ ರಾಜು ಮಗದುಮ್ಮ ಹೇಳಿದರು.
ಪಟ್ಟಣದ ಶ್ರೀಅರಿಹಂತ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮುಖ್ಯ ಶಾಖೆಯ ೩೫ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಅರಿಹಂತ ಸಂಸ್ಥೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಶಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತ, ಸಹಕಾರಿ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡುತ್ತಿದೆ. ಸದಸ್ಯರ ಬೇಡಿಕೆಯಂತೆ ಶೀಘ್ರದಲ್ಲೇ ಗೋವಾ ರಾಜ್ಯಕ್ಕೂ ಸಂಸ್ಥೆಯನ್ನು ವಿಸ್ತರಿಸಲಾಗುವುದು. ದಿ.ರಾವಸಾಹೇಬ ಪಾಟೀಲ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಸಂಸ್ಥೆ ಅಧ್ಯಕ್ಷ ಅಭಿನಂದನ ಪಾಟೀಲ ಮತ್ತು ಯುವ ನಾಯಕ ಉತ್ತಮ ಪಾಟೀಲ ಮಾರ್ಗದರ್ಶನದಲ್ಲಿ ಸದಸ್ಯರಿಗೆ ವಿವಿಧ ಸಾಲ ಯೋಜನೆ, ಠೇವಣಿ ಯೋಜನೆ ಮತ್ತು ಇತರ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ನಿರ್ದೇಶಕರಾದ ರಾಜು ಮಗದುಮ್ಮ, ಜಂಬೂ ಮಳವಾಡೆ, ಅಣ್ಣಾಸಾಹೇಬ ಭೋಜಕರ, ಎಸ್.ಬಿ.ಪಾಟೀಲ, ಸಹಾಯಕ ವ್ಯವಸ್ಥಾಪಕ ಅಭಿನಂದನ ಬೆನಾಡೆ, ಭರತ ಗುಂಡೆ, ಅಭಯ ಖೋತ, ಪ್ರಕಾಶ ಜಂಗಟೆ, ನಿತಿನ ಘಾಳೆ ಬಾಳಾಸಾಹೇಬ ಚೌಗುಲೆ ಇತರರಿದ್ದರು.