ಜಿಲ್ಲೆ

ವಿಷ್ಣಪ್ಪ ದೇವಾಲಯದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

reportermys

ಮಡಿಕೇರಿ: ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮದ ವಿಷ್ಣಪ್ಪ ದೇವಾಲಯದಲ್ಲಿ ಹೊರಾಂಗಣದ ಸುತ್ತ ಇಂಟರ್ ಲಾಕ್ ಅಳವಡಿಕೆ ಕಾಮಗಾರಿಗೆ ಗ್ರಾಮದ ಹಿರಿಯರಾದ ತೆನ್ನಿರ ತಿಮ್ಮಯ್ಯನವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಶುಕ್ರವಾರ ಚಾಲನೆ ನೀಡಲಾಯಿತು.


ಆರಂಭದಲ್ಲಿ ದೇವನೆಲೆಯಲ್ಲಿ ದೇವಸ್ಥಾನದ ಪರವಾಗಿ ಆಡಳಿತ ಮಂಡಳಿಯ ಸದಸ್ಯ ಚೆರುಮಾಡಂಡ ಸತೀಶ್ ಸೋಮಣ್ಣ ಹಾಗೂ ಒಕ್ಕದ ಪರವಾಗಿ ತೆನ್ನಿರ ಮೈನ ಪ್ರಾರ್ಥನೆ ಮಾಡಿದರು. ದೇವಸ್ಥಾನದ ಮುಖ್ಯ ಅರ್ಚಕ ದೇವಿ ಪ್ರಸಾದ್‌ರವರು ಪೂಜಾ ವಿಧಿವಿಧಾನಗಳನ್ನು ಪೂರೈಸಿದರು.


ಗ್ರಾಮದ ಹಿರಿಯರಾದ ತೆನ್ನಿರ ಸಾಬು ಬೆಳ್ಯಪ್ಪ, ತೆನ್ನಿರ ಜಯ ದೇವಯ್ಯ, ಆಡಳಿತ ಮಂಡಳಿ ಖಜಾಂಚಿ ಮುಂಜಾಂದಿರ ವಾಸು ನಾಣಯ್ಯ, ಕಾರ್ಯದರ್ಶಿ ಗೋವಿಂದಮ್ಮನ ರಾಮಯ್ಯ, ಸದಸ್ಯರಾದ ತೆನ್ನಿರ ಪೆಮ್ಮಯ್ಯ, ಚಾತುರನ ಅಶೋಕ್, ಕೋಳುಮಾಡಂಡ ಕಿರಣ್, ಗುತ್ತಗೆದಾರ ಬಿಜು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.