ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ತಾಲೂಕಿನ ದುದ್ದ ಹೋಬಳಿಯ ವಿವಿಧ ಗ್ರಾಮದಲ್ಲಿ 2.50 ಕೋಟಿ ರೂ. ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಶಾಸಕ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು.
ಹಾಡ್ಯ ಗ್ರಾಮದಲ್ಲಿ 49 ಲಕ್ಷ ರೂ. ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ, ಗ್ರಾಮದ ವಾಟರ್ ಟ್ಯಾಂಕರ್‌ನಿಂದ ರಸ್ತೆ ಮತ್ತು ಚರಂಡಿ ಹಾಗೂ ಗಂಗಾಮತಸ್ಥರ ಬೀದಿವರೆಗೆ ಚರಂಡಿ ಮತ್ತು ರಸ್ತೆ ಅಭಿವೃದ್ಧಿ, ಬೀರಗೌಡನಹಳ್ಳಿ ಗ್ರಾಮದಲ್ಲಿ ಕೆಆರ್‌ಐಡಿಎಲ್ ವತಿಯಿಂದ 50 ಲಕ್ಷ ರೂ. ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ, ಬಿ.ಹೊಸಹಳ್ಳಿ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ, ಬೆಟ್ಟಹಳ್ಳಿ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಹಳೆ ಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ರಸ್ತೆ ಅಭಿವೃದ್ಧಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಕೆಆರ್‌ಐಡಿಎಲ್‌ನಿಂದ ಈಗಾಗಲೇ ಅನುಮತಿ ದೊರೆತ್ತಿದ್ದು, ಕಾಮಗಾರಿ ಪ್ರಾರಂಭಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಈ ಭಾಗದ ರಸ್ತೆಗಳು ಸಂಪೂರ್ಣವಾಗಿ ಅಭಿವೃದ್ಧಿಯಾಗುತ್ತವೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಎಚ್.ಆರ್.ಆತ್ಮಾನಂದ, ಗೌರಮ್ಮ, ಉಮೇಶ್, ತಾಪಂ ಮಾಜಿ ಸದಸ್ಯ ಎಚ್.ಬಿ.ಬೆಟ್ಟಸ್ವಾಮಿ, ಹಾಡ್ಯ ಗ್ರಾಮದ ಯಜಮಾನರಾದ ಪುಟ್ಟಸ್ವಾಮಿ, ಅನಿಲ್ಕುಮಾರ್, ದೇವೇಗೌಡ, ಬೋರಯ್ಯ, ಎಚ್.ಬಿ.ಜವರೇಗೌಡ, ಎಚ್.ಕೆ.ಬೋರೇಗೌಡ, ಜ್ಞಾನಮೂರ್ತಿ, ಎಂ.ರಮೇಶ್, ಪ್ರೇಮಾ, ಶ್ರೀಕಂಠ, ಸೋಮಶೇಖರ್, ಮಹೇಶ್, ರಾಹುಲ್, ಸಂತೋಷ್, ಶ್ರೀಧರ್, ಚಿಕ್ಕಮರೀಗೌಡ, ಅಯ್ಯಪ್ಪ, ಪಾರ್ಥಸಾರಥಿ, ಗದ್ದೇಗೌಡ ಇತರರಿದ್ದರು.