ಜಿಲ್ಲೆ

ಅಭಿವೃದ್ಧಿ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್

ಕನಕಪುರ:  ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಆಚರಿಸಲಾಯಿತು.

ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸರಳ ಸಮಾರಂಭದ ಅಧ್ಯಕ್ಷತೆಯನ್ನು ಶಿರಸ್ತೆದಾರ್ ರಘು ವಹಿಸಿದ್ದರು. ಪುಷ್ಪ ನಮನ ಸಲ್ಲಿಸಿ ನಾಲ್ವಡಿಯವರು ಅಭಿವೃದ್ಧಿಯ ಹರಿಕಾರರಾಗಿದ್ದರು ಎಂದು ಬಣ್ಣಿಸಿದರು.

ಧಮ್ಮದಿವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೃಷ್ಣರಾಜ ಜಲಾಶಯ ಅಣೆಕಟ್ಟು ಅವರ ಮಹತ್ವದ ಉಪಕ್ರಮಗಳಲ್ಲಿ ಒಂದಾಗಿದೆ. ಅವರು ತನ್ನ ಜನೋಪಕಾರ ಆಡಳಿತ ಮತ್ತು ಪ್ರಜೆಗಳ ಬಗ್ಗೆ ನಿಜವಾದ ಕಾಳಜಿಗೆ ಹೆಸರಾಗಿದ್ದರು. ಇವರ ಜನೋಪಕಾರಿ ಕಾರ್ಯಕ್ರಮಗಳಿಗೆ ಬ್ರಿಟಿಷರು ಅತ್ಯಂತ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಎಂದರು.

ಭಾರತ್ ಸೇವಾದಳ ಜಿಲ್ಲಾಪ್ರತಿನಿಧಿ ಆನಂದ್‌ಪೈ, ಸಾಹಿತಿ ಕೂ.ಗಿ.ಗಿರಿಯಪ್ಪ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಯಪ್ರಕಾಶ್, ಜಯಕರ್ನಾಟಕ ಜನಪರ ವೇದಿಕೆ ಕುಮಾರಸ್ವಾಮಿ, ಬಿಜೆಪಿ ಮುಖಂಡ ಶಿವಮುತ್ತು, ರೈತ ಸಂಘದ ನಲ್ಲಹಳ್ಳಿ ಶ್ರೀನಿವಾಸ್, ಕೆಬ್ಬಳ್ಳಿ ಶಿವರಾಜು, ಕೆ.ಆರ್.ಸುರೇಶ್ ವಸಂತಕುಮಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.