ಉಡುಪಿ: ರಾಜ್ಯ ಸರ್ಕಾರದ ಬಜೆಟ್ 3 ಲಕ್ಷ ಕೋಟಿ ರೂ. ಇದರಲ್ಲಿ 1.5 ಲಕ್ಷ ಕೋಟಿ ರೂ. ಸಿಬ್ಬಂದಿ ಸಂಬಳ ಮತ್ತು ಅಡಳಿತಾತ್ಮಕ ವೆಚ್ಚಕ್ಕೆ ರ್ಖಚಾಗುತ್ತದೆ. ಉಳಿದ 1.5 ಲಕ್ಷ ಕೋಟಿ ರೂ. 34 ಖಾತೆಗಳಿಗೆ ಹಂಚಿಕೆಯಾಗುತ್ತದೆ. ಗ್ಯಾರೆಂಟಿ ಯೋಜನೆಗೆ 60 ರಿಂದ 70 ಸಾವಿರ ಕೋಟಿ ಬೇಕಾಗಿದೆ. ಹೀಗಾಗಿ ಸರ್ಕಾರ ಅಧಿಕಾರಕ್ಕೆ ಬಂದು 4 ತಿಂಗಳಾದರೂ ಶಾಸಕರಿಗೆ ಯಾವುದೇ ಅನುದಾನ ಬಂದಿಲ್ಲ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಗ್ಯಾರೆಂಟಿ ಯೋಜನೆ ತೊಡಕಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಮಂಗಳವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಮಾಜಿಕ ಕಲ್ಯಾಣ ಯೋಜನೆಗೆ ಸ್ವಾಗತವಿದೆ. ಅದರೆ ಯಾರಿಗೆ ಅಗತ್ಯವಿದೆಯೋ ಅವರಿಗೆ ಕೊಡಬೇಕಾದದ್ದನ್ನು ಕಡಿತ ಮಾಡಿ ಇನ್ನೊಬ್ಬರಿಗೆ ನೀಡುವುದಕ್ಕೆ ವಿರೋಧವಿದೆ. ದೇಶದಲ್ಲಿ ಅರ್ಥಿಕ ನಿರ್ವಹಣೆಯಲ್ಲಿ ಕರ್ನಾಟಕ ಟಾಪ್ 3 ಸ್ಥಾನದಲ್ಲಿತ್ತು. ಗ್ಯಾರೆಂಟಿ ಯೋಜನೆಯಿಂದ ಇದು ಮಣ್ಣಪಾಲು ಆಗುವ ಅತಂಕ ಎದುರಾಗಿದೆ ಎಂದರು.
ಸರ್ಕಾರ ಎಂದರೆ ಕೇವಲ 5 ಗ್ಯಾರೆಂಟಿ ಕೊಡುವುದು ಮಾತ್ರವಲ್ಲ. ಶಿಕ್ಷಣ, ಅರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳತ್ತ ಗಮನಹರಿಸಬೇಕು. ವಿರೋಧಪಕ್ಷ ಮತ್ತು ಅಡಳಿತ ಪಕ್ಷ ಎಂಬ ಭೇದವಿಲ್ಲದೆ ಪ್ರತಿ ಶಾಸಕರಿಗೆ ಎಂಎಲ್ಎ ಗ್ರಾ$ಂಟ್ ಹಂಚಿಕೆಯಾಗುತ್ತದೆ. ಆದರೆ ಜಿಲ್ಲೆಯ ಯಾವುದೇ ಶಾಸಕರಿಗೆ ಈವರೆಗೂ ಅಭಿವೃದ್ಧಿ ಕೆಲಸಕ್ಕೆ ಬರಬೇಕಾದ ಹಣ ಬಿಡುಗಡೆಯಾಗಿಲ್ಲ. ಜನಪ್ರತಿನಿಧಿಗಳು ಜನರ ಬಳಿಗೆ ಹೋದಾಗ ಅವರಿಗೆ ಬೇಕಾಗಿರುವುದು ರಸ್ತೆ, ನೀರು, ವಿದ್ಯುತ್, ದಾರಿದೀಪ. ಇದನ್ನು ಕೊಡಲು ಈಗ ಸರ್ಕಾರದ ಬಳಿ ದುಡ್ಡಿಲ್ಲ ಎಂದರು.
ಸಂಸದ ಸ್ಥಾನ ಆಕಾಂಕ್ಷಿ
ಉಡುಪಿ&ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ಟಿಕೆಟ್ ಸಿಗದಿದ್ದರೂ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ಸಂಸದೀಯ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಕೊನೆ ಗಳಿಗೆಯಲ್ಲಿ ತೊಂದರೆಯಾಗಬಾರದು ಎಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಓಡಾಟ ಮಾಡುತ್ತಿದ್ದೇನೆ. ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿಗೆ ವಿರೋಧಿಸುತ್ತಿರುವ ಕಾಂಗ್ರೆಸ್ 28 ಪಕ್ಷಗಳೊಂದಿಗೆ ಒಕ್ಕೂಟ ರಚಿಸಿಕೊಂಡಿದೆ. ಅದು ಸರಿಯಾದರೆ ಇದೂ ಕೂಡ ಸರಿ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ರಾಜೇಶ್ ಶೆಟ್ಟಿ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಪ್ರ.ಕಾ. ನಜೀರ್ ಪೊಲ್ಯ, ರಜತಸಮಿತಿ ಅಧ್ಯಕ್ಷ ಮೊಹಮ್ಮದ್ ಶರ್ೀ, ಪ್ರೆಸ್ ಕ್ಲಬ್ ಸಂಚಾಲಕ ಅಜಿತ್ ಹಾರಾಡಿ ಉಪಸ್ಥಿತರಿದ್ದರು.