ಜಿಲ್ಲೆ

ಶ್ರಮದಿಂದ ದೇಶದ ಅಭಿವೃದ್ಧಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನೆಲಮಂಗಲ: ಸುಂದರ ಸಮಾಜ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ ಎಂದು ಕಲ್ಪವೃಕ್ಷ ಕಟ್ಟಡ ಕಾರ್ಮಿಕರು ಹಾಗೂ ಅಸಂಟಿತ ಕಾರ್ಮಿಕರ ಸಂಟನೆ ರಾಜ್ಯಾಧ್ಯಕ್ಷ ಬಿ.ನರಸಿಂಹಯ್ಯ ತಿಳಿಸಿದರು.

ನಗರದ ಕೆಎಸ್​ಆರ್​ಟಿಸಿ ಬಡಾವಣೆಯಲ್ಲಿ ಕಲ್ಪವೃಕ್ಷ ಕಟ್ಟಡ ಕಾರ್ಮಿಕರು ಹಾಗೂ ಅಸಂಟಿತ ಕಾರ್ಮಿಕರ ಸಂಟನೆಯಿಂದ ಆಯೋಜಿಸಿದ್ದ ಕಾರ್ಮಿಕರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಮಿಕರು ಪರಿಶ್ರಮಪಟ್ಟಿದ್ದರಿಂದಲೇ ದೇಶದ ಅಭಿವೃದ್ಧಿ ಸಾಧ್ಯವಾಗಿದೆ. ಕಾರ್ಮಿಕರಿಗೆ ಗೌರವಯುತ ಬದುಕು ಕಟ್ಟಿಕೊಡಬೇಕು. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಮಾಡಬೇಕು. ಕಾರ್ಮಿಕರಿಗೆ ದೊರೆಯಬೇಕಾದ ಸೌಕರ್ಯಗಳು ನಿಷ್ಠೆ ಮತ್ತು ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯ ಸಂಟನೆಯಿಂದ ಮಾಡಲಾಗುತ್ತಿದೆ. ಜತೆಗೆ ಕಾರ್ಮಿಕರ ಸಂಕಷ್ಟಕ್ಕೆ ನಿರಂತರವಾಗಿ ಸ್ಪಂದಿಸಲಾಗುತ್ತಿದೆ ಎಂದರು.

ಕಾರ್ಮಿಕ ಮಹಿಳೆಗೆ ಸಹಾಯ: ಇತ್ತೀಚೆಗೆ ಕ್ಯಾನ್ಸರ್​ ಸಮಸ್ಯೆಯಿಂದ ಬಳುತ್ತಿದ್ದ ಭದ್ರಾವತಿ ಮೂಲದ ಕಾರ್ಮಿಕರಾದ ಮೌಲ್ಯಮ್ಮ ಅವರಿಗೆ ಸಂಟನೆ ಹಾಗೂ ವಿವಿಧ ಕಾರ್ಮಿಕರ ಸಹಕಾರದಿಂದ ಧನಸಹಾಯ ಮಾಡಲಾಯಿತು.

ನಮ್ಮ ಜನಸೈನ್ಯ ಸಂಟನೆರ ಅಧ್ಯಕ್ಷ ರಮೇಶ್​, ಗೌರವಾಧ್ಯಕ್ಷ ಕೆ.ಟಿ.ನಾಗರಾಜು, ಕಾರ್ಮಿಕ ಮುಖಂಡರಾದ ಗರುಡಪ್ಪ, ಗಂಗರಾಜು, ಮಂಜುನಾಥ್​, ಬಾವಿಕೆರೆನಾಗೇಶ್​, ಸಂತೋಷ್​, ಹನುಂತರಾಯಪ್ಪ, ಸಿದ್ದರಾಜು, ರವಿ, ಕುಮಾರ್​ ಇದ್ದರು.