ಜಿಲ್ಲೆ

ಚಾಮುಂಡಿ ಬೆಟ್ಟದ ಹುಂಡಿ ಹಣದಿಂದ ಸಿ ಕೆಟಗರಿ ದೇವಾಲಯಗಳ ಅಭಿವೃದ್ಧಿ

ಮೈಸೂರು: ಚಾಮುಂಡಿ ಬೆಟ್ಟದ ಹುಂಡಿ ಹಣದಿಂದ ಸಿ ಕೆಟಗರಿ ದೇವಾಲಯಗಳ ಅಭಿವೃದ್ದಿಗೆ ಮಾಡಬೇಕಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟದ ಹುಂಡಿ ಹಣದಲ್ಲಿ ಬರುವ ಆದಾಯದಲ್ಲಿ ಪಾಳು ಬಿದ್ದಿರುವ ದೇವಾಲಯಗಳನ್ನು ಅಭಿವೃದ್ದಿಪಡಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುತ್ತೇನೆ.

ಮೈಸೂರಿನಲ್ಲಿ ಸಾಕಷ್ಟು ಐತಿಹಾಸಿಕ ದೇವಸ್ಥಾನಗಳಿವೆ. ಅವುಗಳಲ್ಲಿ ಕೆಲವು ದುಃಸ್ಥಿತಿಯಲ್ಲಿದ್ದು, ಪಾಳು ಬಿದ್ದಿವೆ. ಅವುಗಳ ಅಭಿವೃದ್ಧಿಗೆ ಚಾಮುಂಡಿ ಬೆಟ್ಟದ ಹುಂಡಿಯಿಂದ ಬರುವ ಆದಾಯ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ.

ದೇವಾಲಯಗಳ ಅಭಿವೃದ್ಧಿಗೆ ಸರ್ಕಾರದ ಅನುದಾನಕ್ಕೆ ಕಾಯಬೇಕಿಲ್ಲ. ಹೆಚ್ಚು ಆದಾಯಗಳಿರುವ ದೇವಸ್ಥಾನಗಳು ಕಡಿಮೆ ಆದಾಯವಿರುವ ದೇವಾಲಯಗಳನ್ನು ದತ್ತು ಪಡೆದರೆ ಸಾಕು. ಈ ಬಗ್ಗೆ ಕಾನೂನಿನಲ್ಲಿ ಅವಕಾಶವಿದೆ ಎಂದರು. ಚಾಮುಂಡಿ ಬೆಟ್ಟದ ಹುಂಡಿ ಹಣ ಸುಮಾರು 130 ಕೋಟಿ ರೂಪಾಯಿ ಇದೆ. ಚಾಮುಂಡಿ ದೇವಿಯ ಕೃಪೆಯಿಂದ ಎಲ್ಲ ದೇವಾಲಯಗಳು ಅಭಿವೃದ್ದಿಯಾಗಲೆಂಬ ಉದ್ದೇಶವಿದೆ ಎಂದರು.