ಕಿಕ್ಕೇರಿ ಹೋಬಳಿಯ ಆನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿಗಾಗಿ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕ ಮೋಹನ್ 2.5 ಲಕ್ಷ ರೂ. ಅನುದಾನದ ಚೆಕ್ ಶುಕ್ರವಾರ ನೀಡಿದರು. ಸಂಘದ ಅಧ್ಯಕ್ಷ ಎ.ಇ. ಕುಮಾರ್, ನಿರ್ದೇಶಕ ದಾನಶೇಖರ್, ಮಧು ಹಾಜರಿದ್ದರು. 
ಜಿಲ್ಲೆ

ಸಂಘಗಳ ಅಭಿವೃದ್ಧಿ ಪ್ರಾಮಾಣಿಕ ಪ್ರಯತ್ನ

ರವಿಕುಮಾರ್ ಪಿ. ಕೆ

ಕಿಕ್ಕೇರಿ: ರೈತರ ಜೀವನಾಡಿಯಾಗಿರುವ ಸಂಘಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕ ಮೋಹನ್ ತಿಳಿಸಿದರು.

ಹೋಬಳಿಯ ಆನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗುರುವಾರ ಭೇಟಿ ನೀಡಿ ತಮ್ಮ ಮಂಡಳಿಯಿಂದ 2.5ಲಕ್ಷ ರೂ. ಅನುದಾನದ ಚೆಕ್ ವಿತರಿಸಿ ಮಾತನಾಡಿದರು. ಹೋಬಳಿಯ ಗಡಿಭಾಗದ ಸಂಘ ಇದಾಗಿದೆ. ಸಂಘಗಳ ಅಭಿವೃದ್ಧಿಯಿಂದ ರೈತ ನೆಮ್ಮದಿಯ ಬದುಕು ಸಾಗಿಸಬಹುದಾಗಿದೆ. ರಾಜಕೀಯಮುಕ್ತವಾಗಿ ರೈತರ ಸಮಸ್ಯೆಗಳಿಗೆ, ಆರ್ಥಿಕ ಸಮಸ್ಯೆಗಳಿಗೆ ಸಂಘ ಸ್ಪಂದಿಸಲಿ. ತಮ್ಮ ಸಹಕಾರ ಸದಾ ಇದೆ ಎಂದರು.

ಸಂಘದ ಅಧ್ಯಕ್ಷ ಎ.ಇ. ಕುಮಾರ್, ನಿರ್ದೇಶಕ ದಾನಶೇಖರ್, ಮಧು ಹಾಜರಿದ್ದರು.