ತಾವರಗೇರಾ ಸಮೀಪದ ಹಿರೇತೆಮ್ಮಿನಾಳ ಗ್ರಾಮಸ್ಥರು ಶಾಸಕ ದೊಡ್ಡನಗೌಡ ಪಾಟೀಲ್‌ರನ್ನು ಸನ್ಮಾನಿಸಿದರು. ಮಹೇಶ, ಶುಕಮುನಿ, ಯಮನೂರಪ್ಪ, ರಾಜಣ್ಣ ಇದ್ದರು. 
ಜಿಲ್ಲೆ

ಅಭಿವೃದ್ಧಿ ಕಾರ್ಯದತ್ತ ಚಿತ್ತ

ತಾವರಗೇರಾ: ಮೂರು ಬಾರಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ. ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಭರವಸೆ ನೀಡಿದರು.

ಸಮೀಪದ ಹಿರೇತೆಮ್ಮಿನಾಳ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮತದಾರರು, ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯ ಕ್ರಮದಲ್ಲಿ ಮಾತನಾಡಿದರು. ಹಂತ-ಹಂತವಾಗಿ ಮೂಲ ಸೌಲಭ್ಯ ಕಲ್ಪಿಸಲಾಗುವುದು.

ಕಾಂಗ್ರೆಸ್‌ನ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೇ ಕ್ಷೇತ್ರದ ಜನತೆ 10,000 ಮತಗಳನ್ನು ನೀಡುವ ಮೂಲಕ ಗೆಲ್ಲಿಸಿದ್ದೀರಿ. ಋಣವನ್ನು ಈ ಜನ್ಮದಲ್ಲಿ ತೀರಿಸಿಲು ಸಾಧ್ಯವಿಲ್ಲ ಎಂದರು.

ಗ್ರಾಮಕ್ಕೆ ಸಿಸಿ ರಸ್ತೆ ನಿರ್ಮಾಣ, ಎಸ್ಸಿ ಕಾಲನಿಯಲ್ಲಿ ಶ್ರೀಕೆಂಚಮ್ಮದೇವಿ ದೇವಸ್ಥಾನ ಜೀರ್ಣೋದ್ಧಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ, ಸಾರ್ವಜನಿಕ ಗ್ರಂಥಾಲಯ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಗ್ರಾಮಸ್ಥರು ಶಾಸಕಗೆ ಮನವಿ ಸಲ್ಲಿಸಿದರು.

ಇದಕ್ಕೆ ಸ್ಪಂದಿಸಿದ ದೊಡ್ಡನಗೌಡ, ಹೊಸ ಸರ್ಕಾರ ಬಂದ ಮೇಲೆ ಯಾವುದೇ ಅನದಾನ ಬಂದಿಲ್ಲ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬೇಡಿಕೆಯನ್ನು ಈಡೇರಿಸುವದಾಗಿ ಭರವಸೆ ನೀಡಿದರು.

ಪ್ರಮುಖರಾದ ಅಶೋಕ ಬಳೂಟಗಿ, ಜಿಪಂ ಮಾಜಿ ಸದಸ್ಯ ಕೆ.ಮಹೇಶ, ಗ್ರಾಪಂ ಮಾಜಿ ಅಧ್ಯಕ್ಷ ಛತ್ರಪ್ಪ ಕಂಬಳಿ, ರಮೇಶ ಗಿರಣಿ, ಯಮನೂರಪ್ಪ ಲಿಂಗದಹಳ್ಳಿ, ಮಹೇಶ ಕನ್ನಾಳ, ರಾಜಣ್ಣ ನಂದಾಪೂರು, ಪರಶುರಾಮ, ಶುಕಮುನಿಸ್ವಾಮಿ, ಚಂದ್ರು ವಡಗೇರಿ ಇದ್ದರು.